ದುಬೈನ್ ಅಲ್ ಶೇಕ್ ಝಹೇಜ್ ಕ್ರೀಡಾoಗಣದಲ್ಲಿ ಇಂದು ನಡೆದ ಐಪಿಎಲ್ ನ 13ನೇ ಸರಣಿಯ 6ನೇ ದಿನದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲುವಿನ ಗರಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸೋಲಿನ್ ರುಚಿಯನ್ನನುಭವಿಸಬೇಕಾಯ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ನಾಯಕ ಕೆ.ಎಲ್. ರಾಹುಲ್ ಅವರು, ಇಂದಿನ ಸ್ಕೋರ್ ಗಳ ಹೊಳೆಯನ್ನೇ ಹರಿಸಿದರು. 69 ಎಸೆತಗಳಲ್ಲಿ 132 ರನ್ ಗಳನ್ನು ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು. ಕೆ.ಎಲ್. ರಾಹುಲ್ ಅವರ ಸಹ ಆಟಗಾರ ಎಂ. ಅಗರ್ವಾಲ್ ಅವರು ಕೆ.ಎಲ್. ರಾಹುಲ್ ಅವರಿಗೆ ಒಳ್ಳೆಯ ಜೊತೆಯನ್ನು ನೀಡಿದರು. ತಂಡವು 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
ಪಂಜಾಬ್ ತಂಡ ಕೊಟ್ಟ ಗುರಿಯನ್ನು ಬೆನ್ನತ್ತಿ ಹೊರಟ ಚಾಲೆಂಜರ್ಸ್ ಗೆ ನಿರಾಸೆ ಕಾದಿತ್ತು. ರಾಯಲ್ ಚಾಲೆಂಜರ್ಸ್ ತಂಡದ ಆರಂಭಿಕ ಆಟಗಾರರಾಗಿ ಡಿ. ಪಡಿಕ್ಕಲ್ ಅವರು ಫೀಲ್ಡಿಗಿಳಿದಾಗ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು. ಕಳೆದ ಮ್ಯಾಚ್ ನಲ್ಲಿ ಪಡಿಕ್ಕಲ್ ಅವರ ಕೊಡುಗೆಯನ್ನು ಯಾರೂ ಮರೆಯುವಂತಿರಲಿಲ್ಲ. ಆದರೆ ಅವರು ಕೇವಲ್ ಒಂದು ರನ್ ಗೆ ಔಟಾದಾಗ ಎಲ್ಲರ ನಿರೀಕ್ಷೆಯೂ ಸುಳ್ಳಾಯಿತು. ಎ.ಫಿಂಚ್ 20 (21), ಎಬಿ ಡೀ ವಿಲಿಯರ್ಸ್ 28 (18), ಡಬ್ಲ್ಯೂ. ಸುಂದರ್ 30 (27) ರನ್ ಗಳಿಸಿ ತಂಡವನ್ನು ನಿಗದಿತ ಗುರಿಯತ್ತ ಮುನ್ನಡೆಸುವಲ್ಲಿ ಪ್ರಯತ್ನ ಪಟ್ಟರು. ಆದರೆ ಮುರುಗನ್ ಅಶ್ವಿನ್, ರವಿ ಬಿಷ್ಣೋಯಿ ಅವರ ಬೌಲಿಂಗ್ ಎಲ್ಲ ಬ್ಯಾಟ್ಸ್ ಮನ್ ಗಳ ನೀರಿಳಿಸಿತು. 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ ಕೇವಲ 109 ರನ್ ಗಳನ್ನು ಮಾತ್ರ ಗಳಿಸಲು ತಂಡಕ್ಕೆ ಸಾಧ್ಯವಾಗಿದ್ದು.
ಇಡೀ ಪಂದ್ಯದಲ್ಲಿ ಘರ್ಜಿಸಿದ ರಾಹುಲ್ ಅವರಿಗೆ ಪಂದ್ಯದ ಶ್ರೇಷ್ಠ ಆಟಗಾರ ಬಿರುದು ಸಿಕ್ಕಿತು.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ