ಪಿಎಸ್ಐ ಪರೀಕ್ಷೆ ಹಗರಣ- 3 ತಿಂಗಳಿಂದ ಎಸ್ಕೇಪ್ ಆಗಿದ್ದ ಮತ್ತೊಬ್ಬ PSI ಬಂಧನ: ಮಂಬೈನಲ್ಲಿ ಸಿಐಡಿ ಬಲೆಗೆ

Team Newsnap
1 Min Read
PSI Scam- PSI absconding arrested: CID trap in Mumbai ಪಿಎಸ್ಐ ಪರೀಕ್ಷೆ ಹಗರಣ- 3 ತಿಂಗಳಿಂದ ಎಸ್ಕೇಪ್ಆಗಿದ್ದ ಮತ್ತೊಬ್ಬ PSI ಬಂಧನ: ಮಂಬೈನಲ್ಲಿ ಸಿಐಡಿ ಬಲೆಗ

ಪಿಎಸ್ಐ ನೇಮಕಾತಿ ಹಗರಣ ದಲ್ಲಿ 3 ತಿಂಗಳಿನಿಂದ ಎಸ್ಕೇಪ್ ಆಗಿದ್ದ ಕಾಮಾಕ್ಷಿ ಪಾಳ್ಯ ಪೋಇಸ್ ಠಾಣೆಯ ಪಿಎಸ್ ಐ ಶರೀಪ್ ನನ್ನು ಮುಂಬೈನಲ್ಲಿ ಸಿಐಡಿ ಪೋಲಿಸರು ಬಂಧಿಸಿದ್ದಾರೆ

ಪಿಎಸ್‌ಐ ಹಗರಣದಲ್ಲಿ ಎಡಿಜಿಪಿಯಾಗಿದ್ದ ಅಮೃತ್‌ ಪೌಲ್‌ ಪಿಎಸ್‌ಐ ಅಕ್ರಮದಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ. ಬಂಧಿತ ಆರೋಪಿಗಳು ದಿನಕ್ಕೊಂದು ಸತ್ಯ ಬಾಯ್ಬಿಡಲಾರಂಭಿಸಿದ್ದಾರೆ. ಇದನ್ನು ಓದಿ –ಸುರತ್ಕಲ್ ಫಾಜಿಲ್​ ಹತ್ಯೆಗೆ ಸಾಥ್​ ನೀಡಿದ್ದ ಕಾರ್ ಚಾಲಕ ಕಂ ಮಾಲೀಕ ಅಜಿತ್ ಬಂಧನ

ಪ್ರಕರಣ ಬಯಲಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಒಬ್ಬೊಬ್ಬರಾಗಿ ಸಿಐಡಿ ಬಲೆಗೆ ಬೀಳುತಿದ್ದಾರೆ. ಪ್ರಕರಣ ಸಂಬಂಧ ಏಜೆಂಟ್ ಆಗಿ ಕಾರ್ಯನಿರ್ವಹಿಸ್ತಿದ್ದ ಪ್ರಮುಖ ಆರೋಪಿ ಸಿಐಡಿ ಬಲೆಗೆ ಬಿದ್ದಿದ್ದಾನೆ. ಪಿಎಸ್ಐ ಶರೀಫ್ ಕಲಿಮಠ್ ಬಂಧಿತ ಆರೋಪಿಯಾಗಿದ್ದಾನೆ

2017ರ ಬ್ಯಾಚ್​ನ ಪಿಎಸ್ಐ ಆಗಿರುವ ಶರೀಫ್ ಕಲಿಮಠ್ಪಿ ಎಸ್ಐ ಪರೀಕ್ಷಾ ಅಕ್ರಮ ಪ್ರಕರಣ ಹೊರಬರ್ತಿದ್ದಂತೆ ಎಸ್ಕೇಪ್ ಆಗಿದ್ದ. ಈಗಾಗಲೇ ಬಂಧಿತ ಆರೋಪಿ ಎಸ್​ಡಿಎ ಹರ್ಷಾ ಮತ್ತು ಅಭ್ಯರ್ಥಿಗಳೊಂದಿಗೆ ಶರೀಫ್​ ನಿರಂತರ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ.


ಅಲ್ಲದೇ ಸುಮಾರು 10 ಜನ ಆಭ್ಯರ್ಥಿಗಳಿಂದ ಹಣ ಪಡೆದುಕೊಂಡು ಎಸ್​ಡಿಎ ಹರ್ಷಾನಿಗೆ ನೀಡಲಾಗಿತ್ತು ಎನ್ನುವ ಆರೋಪ ಇದೆ.

ಸತತ ಮೂರು ತಿಂಗಳಿಂದ ಶರೀಫ್ ಕಲಿಮಠ್ ತಲೆಮಾರಿಸಿಕೊಂಡಿದ್ದ. ಇದೀಗ ಶರೀಫ್ ಕಲಿಮಠನನ್ನ ಸಿಐಡಿ ಮುಂಬೈನಲ್ಲಿ ಬಂಧಿಸಿದೆ. ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

Share This Article
Leave a comment