ಪಿಎಸ್‌ಐ ಅಕ್ರಮ – ಮಾಜಿ ಸಿಎಂ ಪುತ್ರನೂ ಅಕ್ರಮದಲ್ಲಿ ಭಾಗಿ – ವಕೀಲರ ದೂರು

Team Newsnap
1 Min Read
PSI scam: Rudragowda Patil escapes from CID officials ಪಿಎಸ್ ಐ ಹಗರಣ: ರುದ್ರಗೌಡ ಪಾಟೀಲ್ CID ಅಧಿಕಾರಿಗಳಿಂದ ಎಸ್ಕೇಪ್

PSI ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಾಜಿ ಮುಖ್ಯಮಂತ್ರಿ ಮಗನ ಮೇಲೆ ದೂರು ದಾಖಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಸಂಘಟನೆಯ ಪರವಾಗಿ ವಕೀಲರು ಸಿಐಡಿಗೆ ದೂರು ನೀಡಿದ್ದಾರೆ.

ಹೆಸರನ್ನು ಸೂಚಿಸದೇ, ಮಾಜಿ ಮುಖ್ಯಮಂತ್ರಿ ಮಗ ಎಂದು ಆರೋಪ ಮಾಡಲಾಗಿದೆ

ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯ ಪುತ್ರನ ಕೈವಾಡವಿದೆ ಎಂದು ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ. ಮಗ ಕೂಡ ಈ ಹಗರಣದಲ್ಲಿ ತೊಡಗಿರುವ ಬಗ್ಗೆ ರಾಜ್ಯಾದ್ಯಂತ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆರೋಪಿಸಿ, ಅವರನ್ನು ವಿಚಾರಣೆ ಕರೆತರಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಣಪಡೆದಿರುವ ದೊಡ್ಡ ವ್ಯಕ್ತಿಗಳು, ಐಪಿಎಸ್‌ ಅಧಿಕಾರಿಗಳನ್ನು ವಿಚಾರಣೆ ನಡೆಸಿಲ್ಲ. ರಾಜ್ಯದ ಪ್ರಭಾವಿ ಸಚಿವ ಅಶ್ವಥ್‌ ನಾರಾಯಣ, ಪೊಲೀಸ್‌ ಅಧಿಕಾರಿ ಅಮೃತಪಾಲ್‌ ಮತ್ತು ಇತರ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿಲ್ಲ. ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Share This Article
Leave a comment