PSI ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ರಾಯಚೂರು ಜಿಲ್ಲೆಯ ಲಿಂಗಸೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ವಿಚಾರಣೆ ನಡೆಸಿ ಬಳಿಕ ಬಂಧಿಸಿದೆ. ಪಿಎಸ್ಐ ಅಕ್ರಮದ ತನಿಖೆಯ ಸುಳಿ ಸದ್ಯ ನೇಮಕಾತಿ ವಿಭಾಗದ ಹೊಸ್ತಿಲಿಗೆ ಬಂದು ನಿಂತಿದೆ.
ನೇಮಕಾತಿ ಮುಖ್ಯಸ್ಥರು, ಇತರ ಸಿಬ್ಬಂದಿ ವಿಚಾರಣೆಗೆ ನಿರ್ಧರಿಸಲಾಗಿದೆ ಎಡಿಜಿಪಿ ಅಮೃತ್ ಪೌಲ್, ಡಿಎಸ್ಪಿ ಶಾಂತಕುಮಾರ್ ಸೇರಿ 42 ಸಿಬ್ಬಂದಿ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ನೇಮಕಾತಿ ವಿಭಾಗದ ಅಧಿಕಾರಿಗಳು ಬೆಂಗಳೂರು ಬಿಟ್ಟು ಎಲ್ಲಿಯ ತೆರಳುವಂತಿಲ್ಲ ಎಂದು ಸಿಐಡಿ ಸೂಚನೆ ನೀಡಿದೆ.
ಪಿಎಸ್ಐ ಪರೀಕ್ಷೆ ಅಕ್ರಮ, ಭ್ರಷ್ಟಾಚಾರದ ಕಡಲಿನಂತಾಗಿದೆ. ತನಿಖೆ ತೀವ್ರಗೊಂಡಂತೆ ಹೊಸ ಹೊಸ ಅಕ್ರಮ, ಅಕ್ರಮದ ಹಿಂದಿನ ಸೂತ್ರಧಾರಿಗಳು ಬಯಲಿಗೆ ಬರ್ತಿದ್ದಾರೆ. ಕಲಬುರಗಿಯಿಂದ ಬೆಂಗಳೂರಿನವರೆಗೂ ಹರಡಿರುವ ಅಕ್ರಮದ ಬೇರುಗಳ ಬೆನ್ನತ್ತಿದ ಸಿಐಡಿ ಪೊಲೀಸರ ತನಿಖೆ ಜಾಡು ಸದ್ಯ ಪೊಲೀಸರ ಬುಡಕ್ಕೆ ಬಂದು ನಿಂತಿದೆ.
ಪಿಎಸ್ಐ ಅಕ್ರಮದ ತನಿಖೆಯನ್ನು ಸಿಐಡಿ ಟೀಂ ಚುರುಕುಗೊಳಿಸಿದೆ, ಅಕ್ರಮದಲ್ಲಿ ಪೊಲೀಸರೇ ಭಾಗಿಯಾಗಿರುವುದು ಕಂಡುಬಂದಿದೆ. ಹೀಗಾಗಿ ಸದ್ಯದಲ್ಲೇ ನೇಮಕಾತಿ ವಿಭಾಗದ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಯನ್ನು ವಿಚಾರಣೆ ನಡೆಸಲು ಸಿಐಡಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು