ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಖಾಯಂ ಗುತ್ತಿಗೆ ನೌಕರರಿಗೂ ಬಡ್ತಿ ಶಿಫಾರಸ್ಸು

Team Newsnap
1 Min Read

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆದಾರದಲ್ಲಿ ಸೇವೆ ಮಾಡಿ ನಂತರ ಕಾಯಂಗೊಂಡ 1983 ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ನೇಮಕದ ದಿನದಿಂದ ನಿಗದಿಯಾಗಿರುವ ವೇತನವನ್ನು ಯಥಾವತ್ತಾಗಿ ಮುಂದುವರೆಸುವ ಕುರಿತಂತೆ ಶಿಫಾರಸು ಮಾಡಲಾಗಿದೆ.

ಖಾಯಂಗೊಂಡ ಗುತ್ತಿಗೆ ನೌಕರರ ಕಾಲಮಿತಿ ಬಡ್ತಿ ಹಾಗೂ ಸ್ಥಗಿತ ವೇತನ ಬಡ್ತಿಯನ್ನು ಎಂದಿನಂತೆ ಮಂಜೂರು ಮಾಡಬೇಕು ಎಂದು ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ.

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ನಂತರ ಖಾಯಂ ಆಗಿರುವ ಬೋಧಕ ವರ್ಗದ ವೇತನ ಮತ್ತು ಪಿಂಚಣಿ ಪುನರ್ ನಿಗದಿಗಾಗಿ ಇಲಾಖೆಯು ರಚಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರ ನೇತೃತ್ವದ ಪರಿಶೀಲನಾ ಸಮಿತಿಯು ಖಾಯಂಗೊಂಡ ಗುತ್ತಿಗೆ ನೌಕರರ ಬಡ್ತಿಗೆ ಶಿಫಾರಸು ಮಾಡಿದೆ.

Share This Article
Leave a comment