ಗೀಟರ್​ನಲ್ಲಿ ಆಸ್ಟ್ರೇಲಿಯಾಗೆ ಭಾರೀ ಮೊತ್ತದ ಡ್ರಗ್ಸ್ ಕಳ್ಳ ಸಾಗಾಣೆ :ಅಧಿಕಾರಿಗಳಿಂದ ಸೀಜ್

Team Newsnap
1 Min Read

ಆಸ್ಟ್ರೇಲಿಯಾಗೆ ಗೀಟಾರ್ ​ನಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದ ಭಾರೀ ಮೊತ್ತದ ಡ್ರಗ್ಸ್ ಅನ್ನು ಬೆಂಗಳೂರು ಏರ್ ಪೋಟ್೯ ನಲ್ಲಿ ​ ಸೀಜ್ ಮಾಡಲಾಗಿದೆ

ದೇವನಹಳ್ಳಿ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ವಿನೂತನ ಡ್ರಗ್ ಜಾಲವನ್ನು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್ ಪತ್ತೆ ಮಾಡಿದೆ . 50 ಲಕ್ಷ ರು ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಡ್ರಗ್ಸ್​ ಅನ್ನು ಕಳ್ಳ ಸಾಗಾಣೆ ಮಾಡಲು ಕಳ್ಳ ದಾರಿ ಹುಡುಕಿದ್ ಖದೀಮರು, ಕೆಂಪು ಗಿಟಾರ್ ನ ಕಪ್ಪು ಬಣ್ಣದ ಅಂಚಿನಲ್ಲಿ ಡ್ರಗ್ಸ್ ಅಡಗಿಸಿಟ್ಟು ಸಾಗಾಣೆ ಮಾಡಲು ಯತ್ನಿಸಿದ್ದರು.

ಕಳ್ಳ ಸಾಗಾಣೆ ಸುಳಿವು ಸಿಕ್ಕ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿ ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ.

ತಮಿಳುನಾಡಿನಿಂದ ತಿರುಚ್ಚಿಯ ಕೊರಿಯರ್ ಏಜೆನ್ಸಿಯಲ್ಲಿ ಗೀಟರ್​ ಬುಕ್ ಮಾಡಲಾಗಿತ್ತು. ಇದು ಬೆಂಗಳೂರಿಗೆ ಬಂದು ಇಲ್ಲಿಂದ ಆಸ್ಟ್ರೇಲಿಯಾಗೆ ಹೋಗುವ ಪ್ಲಾನ್ ಮಾಡಲಾಗಿತ್ತು.

ಇದರಲ್ಲಿ ಅಡಗಿಟ್ಟಿಸಿದ್ದ ಡ್ರಗ್ಸ್​ಅನ್ನು ಕೆಐಎಎಲ್ ನಿಂದ ಆಸ್ಟ್ರೇಲಿಯಾಗೆ ಏರ್ ಕಾರ್ಗೋ ಮೂಲಕ ಕಳ್ಳಸಾಗಣಿಕೆ ಮಾಡಲಾಗುತ್ತಿತ್ತು.

ಈ ವೇಳೆ ದಾಳಿ ನಡೆಸಿದ್ದ ಇಂಟಲಿಜೆನ್ಸ್ ಅಧಿಕಾರಿಗಳು 3 ಕೆಜಿ ತೂಕದ 50 ಲಕ್ಷ ರೂಪಾಯಿ ಮೌಲ್ಯದ ಸ್ಯೂಡೋಫೆಡ್ರಿನ್ ನಿಷೇಧಿತ ಮಾದಕ ದ್ರವ್ಯ ವಶಕ್ಕೆ ಪಡೆದಿದ್ದಾರೆ.

Share This Article
Leave a comment