ಖಾಸಗಿ ವಾಹಿನಿ ಕ್ಯಾಮೆರಾಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವಕನೊಬ್ಬ ಪತ್ನಿಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಎಪಿಎಂಸಿ ಬಳಿಯ ಕಟ್ಟಡದಲ್ಲಿ ತಡರಾತ್ರಿ ನಡೆದಿದೆ.
ಮುದ್ದೇಬಿಹಾಳದ ಕೊಣ್ಣೂರ ಗ್ರಾಮದ ತಿಪ್ಪಣ್ಣ ಹೊಸಮನಿ (34) ಮತ್ತು ಪತ್ನಿ ಸುಜಾತಾ (30) ಆತ್ಮಹತ್ಯೆ ಮಾಡಿಕೊಂಡ ದಂಪತಿ.ಕುಕ್ಕರ್ ಬಾಂಬರ್ ಶಾರೀಕ್ ನನ್ನೂ ಕೊಲ್ಲುವ ಸಂಚು: ಆಸ್ಪತ್ರೆಗೆ ಭಾರಿ ಭದ್ರತೆ
ಮೃತ ತಿಪ್ಪಣ್ಣ ಬೆಂಗಳೂರಿನ ಖಾಸಗಿ ವಾಹಿನಿಯೊಂದರಲ್ಲಿ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದರು . ಇಬ್ಬರು ಮುದ್ದೇಬಿಹಾಳದ ಮನೆಯಲ್ಲಿರುವ ಅಕ್ಕ-ಪಕ್ಕದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ದಂಪತಿಗಳು 22 ದಿನಗಳ ಹಿಂದಷ್ಟೇ (ನವೆಂಬರ್ 05 ರಂದು) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುದ್ದೇಬಿಹಾಳದ ಕೆಸಾಪೂರ ಗ್ರಾಮಕ್ಕೆ ಸೇರಿದ್ದ ಸುಜಾತರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.
ಆ ಬಳಿಕ ಮುದ್ದೇಬಿಹಾಳ ನಗರದಲ್ಲೇ ಮನೆ ಮಾಡಿಕೊಂಡು ದಂಪತಿ ವಾಸವಾಗಿದ್ದರು .ತಿಪ್ಪಣ್ಣ ಕೆಲ ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಊರಿಗೆ ವಾಪಸ್ ಆಗಿದ್ದರು ಎನ್ನಲಾಗಿದೆ. ಮುದ್ದೇಬಿಹಾಳ ಪೊಲೀಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ನ 114 ಕೋಟಿ ರೂ. ಆಸ್ತಿ ಜಪ್ತಿ
- ಗಾಂಜಾ ಕೇಸ್. : ಪತಿ – ಪತ್ನಿ ಅಂದರ್ – ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್ ಲೇಡಿ
- ಶಾಸಕ ಮಾಡಾಳು ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ವಶಕ್ಕೆ
- ಶಾಸಕ ರಾಜೇಗೌಡರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರು ಮೌಲ್ಯದ ಕುಕ್ಕರ್ ಜಪ್ತಿ
- ಗ್ರಾಮ ಲೆಕ್ಕಿಗ ಯುವತಿ ನೇಣು ಬಿಗಿದುಕೊಂಡ ಆತ್ಮಹತ್ಯೆ
- ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಿದ ಲೋಕಾಯುಕ್ತ ಪೋಲಿಸರು
More Stories
ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ನ 114 ಕೋಟಿ ರೂ. ಆಸ್ತಿ ಜಪ್ತಿ
ಗಾಂಜಾ ಕೇಸ್. : ಪತಿ – ಪತ್ನಿ ಅಂದರ್ – ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್ ಲೇಡಿ
ಶಾಸಕ ಮಾಡಾಳು ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ವಶಕ್ಕೆ