June 5, 2023

Newsnap Kannada

The World at your finger tips!

WhatsApp Image 2022 11 28 at 7.48.05 AM

ಕುಕ್ಕರ್ ಬಾಂಬರ್ ಶಾರೀಕ್ ನನ್ನೂ ಕೊಲ್ಲುವ ಸಂಚು: ಆಸ್ಪತ್ರೆಗೆ ಭಾರಿ ಭದ್ರತೆ

Spread the love

ಮಂಗಳೂರಿನ ಸೂಸೈಡ್ ಬಾಂಬರ್ ಶಾರೀಕ್ ಹತ್ಯೆಗೆ ಸಂಚು ನಡೆದಿದೆ. ಐಸಿಆರ್ ಮಾಡಿದ ಪೋಸ್ಟ್ ನಲ್ಲೇ ಉಗ್ರರು ಈ ಹತ್ಯೆಯ ಸುಳಿವು ನೀಡಿದ್ದಾರೆ. ಹೀಗಾಗಿ. ಶಾರೀಕ್ ಚಿಕಿತ್ಸೆ ಪಡೆಯಿತ್ತಿರುವ ಆಸ್ಪತ್ರೆಗೆ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದಾರೆ.

ಶಾರಿಕ್ ಮೊಬೈಲ್‍ ನಲ್ಲಿ ಪತ್ತೆಯಾದ 1,200 ವೀಡಿಯೋಗಳು, ಬಾಂಬ್ ತಯಾರಿಕೆ, ಪ್ರಚೋದನೆ, ಐಸಿಸ್, ಅಲ್‍ಖೈದಾ ವಿಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದೆ ಬಹುತೇಕ ಕ್ಯಾಶ್ ವ್ಯವಹಾರವೇ ಮಾಡುತ್ತಿದ್ದ ಶಾರೀಕ್ ದಿನವಿಡೀ ಮೊಬೈಲ್‍ನಲ್ಲೇ ವೀಡಿಯೋಗಳನ್ನು ನೋಡ್ತಿದ್ದ. ಮನೆಯವ್ರಿಗೆ ಟಿವಿ ನೋಡಲೂ ಬಿಡುತ್ತಿರಲಿಲ್ವಂತೆ. 4 ವರ್ಷಗಳಿಂದ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದ ಅಂತ ಶಾರೀಕ್ ಕುಟುಂಬಸ್ಥರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ 12 ಅಥವಾ ಶೇ 15 ಕ್ಕೆ ಏರಿಸಿ – ಜನವರಿ 23 ಡೆಡ್‌ಲೈನ್

ಹ್ಯಾಂಡ್ಲರ್ ಗಳು ಸ್ಲೀಪರ್ ಸೆಲ್‍ಗಳನ್ನು ಆಕ್ಟೀವ್ ಮಾಡಿಸಿ ದಾಳಿ ನಡೆಸುವ ಸಾಧ್ಯತೆ ಇದೆ. ಶಾರೀಕ್‍ನೊಂದಿಗೆ ಬ್ಯಾಗ್ ಹಾಕಿಕೊಂಡು ಬಂದವನೂ ನಾಪತ್ತೆ ಆಗಿದ್ದಾನೆ ಆತಂಕ ಹೆಚ್ಚಿದೆ. ಹೀಗಾಗಿ ಶಾರೀಕ್ ಚಿಕಿತ್ಸೆ ಪಡೀತಿರುವ ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ, ಉಗ್ರ ಶಾರೀಕ್ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕರಾವಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹಾಕಿದ್ದ ಆತ್ಮಾಹುತಿ ದಾಳಿಕೋರ ಶಾರೀಕ್‍ನ ಒಂದೊಂದೇ ಉಗ್ರ ಸತ್ಯಗಳು ಈಗ ಬಯಲಾಗುತ್ತಿವೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಗ್ರ ಶಾರೀಕ್‍ನನ್ನೂ ಹತ್ಯೆಗೆ ಸಂಚಿನ ಬಗ್ಗೆ ಶಂಕೆ ವ್ಯಕ್ತವಾಗಿದೆ.

error: Content is protected !!