October 16, 2021

Newsnap Kannada

The World at your finger tips!

ನಾಳೆಯಿಂದ ಅಮೆರಿಕಾಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ

Spread the love

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ (ಸೆ.22) ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ಸೆ. 22 ರಂದು ವಾಷಿಂಗ್ಟನ್ ಡಿಸಿಗೆ ತೆರಳಲಿರುವ ಮೋದಿ ಸೆ.23ರಂದು ಬೆಳಗ್ಗೆ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳನ್ನು ಭೇಟಿಯಾಗಲಿದ್ದಾರೆ.

ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಜೊತೆ ಕೂಡ ಮೋದಿ ಸಭೆ ನಡೆಸಲಿದ್ದಾರೆ ಅಂತ ಗೊತ್ತಾಗಿದೆ.

ಜೋ ಬೈಡನ್​ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಪ್ರಧಾನಿ ಮೋದಿ ಮತ್ತು ಬೈಡನ್​ ನಡುವೆ ಫೋನ್​ನಲ್ಲಿ ಮಾತುಕತೆ ನಡೆದಿದೆ. ಅದು ಬಿಟ್ಟರೆ ಪರಸ್ಪರ ಭೇಟಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇವರಿಬ್ಬರ ಭೇಟಿ ಆಗಲಿದ್ದಾರೆ.

ಭಾರತ ಮೂಲದ ಕಮಲಾ ಹ್ಯಾರಿಸ್​ ಜತೆಗೂ ಕೂಡ ಮೋದಿಯವರು ಇದೇ ಮೊದಲ ಸಲ ದ್ವಿಪಕ್ಷೀಯ ಸಭೆ ಹಮ್ಮಿಕೊಂಡಿದ್ದಾರೆ.

error: Content is protected !!