ಮೈಸೂರು ಬಳಿ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ – ಪುತ್ರ, ಸೊಸೆಗೆ ಗಂಭೀರ ಗಾಯ

Team Newsnap
0 Min Read

ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಕಡಕೊಳ ಬಳಿ ಸಂಭವಿಸಿದ ಅಪಘಾತದಲ್ಲಿ ಪುತ್ರ, ಸೊಸೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಪ್ರಹ್ಹಾದ್‌ ಮೋದಿ ಅವರು ತಮ್ಮ ಪುತ್ರ ಹಾಗೂ ಸೊಸೆ ಜೊತೆಗೆ ಮರ್ಸಿಸೀಸ್‌ ಬೆಂಚ್‌ ಕಾರಿನಲ್ಲಿ ಮೈಸೂರಿನಿಂದ ಬಂಡೀಪುರ ಕಡೆಗೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಮೈಸೂರು ಜಿಲ್ಲಾ ಎಸ್‌ಪಿ ಸೀಮಾ ಕೂಡಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ, ಈ ಕುರಿತಂತೆ ಎಸ್ಪಿ ಮುಖ್ಯಮಂತ್ರಿಗಳ ಕಚೇರಿಗೆ ಸಮಗ್ರ ಮಾಹಿತಿ ನೀಡಿದ್ದಾರೆ.

Share This Article
Leave a comment