ಕೊರಿಯರ್​​ ಅಂಗಡಿಯಲ್ಲಿ ಹೊಸ ಮಿಕ್ಸರ್​ ನಿಗೂಢ ಸ್ಫೋಟ

Team Newsnap
0 Min Read

ಕೊರಿಯರ್ ಅಂಗಡಿಯಲ್ಲಿ ಅನುಮಾನಾಸ್ಪದವಾಗಿ ಮಿಕ್ಸಿ ಬ್ಲಾಸ್ಟ್ ಆದ ಘಟನೆ ಹಾಸನದ ಕುವೆಂಪುನಗರ ಬಡಾವಣೆಯಲ್ಲಿ ಸೋಮವಾರ ಜರುಗಿದೆ.

ಅಂಗಡಿಯಲ್ಲಿದ್ದ ಶಶಿ ಎಂಬುವವರ ಕೈಗೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.ಕೂಡಲೇ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ ಆರ್ ಪೇಟೆಯಲ್ಲಿ ಜನರಿಗೆ ಬೇಕಾಬಿಟ್ಟಿ ಬಿಂದಿಗೆ ಎಸೆದ ಜೆಡಿಎಸ್ ನಾಯಕರು, ಕಾರ್ಯಕರ್ತರು

ಮಿಕ್ಸಿ ಸ್ಫೋಟದ ತೀವ್ರತೆಗೆ ಅಂಗಡಿಯಲ್ಲಿದ್ದ ಇತರೆ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ. ಘಟನಾ ಸ್ಥಳಕ್ಕೆ ಹಾಸನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment