ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿಯಿಂದ ಗ್ರೀನ್ ಸಿಗ್ನಲ್

Team Newsnap
1 Min Read

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ರಾಜಧಾನಿಗಳ ನಡುವೆ ಸಂಚರಿಸುವ ದೇಶದ ಮೂರನೇ, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್ ಪ್ರೆಸ್ ದೇಶದ ಮೂರನೇ ರೈಲು. ‘ಮೇಕ್ ಇನ್ ಇಂಡಿಯಾ’ ಅಭಿಯಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ವಂದೇ ಭಾರತ್ ಎಕ್ಸ್ ಪ್ರೆಸ್ ರಾಷ್ಟ್ರದ ಪ್ರತಿಯೊಂದು ವಿಭಾಗವನ್ನು ಸಂಪರ್ಕಿಸುತ್ತದೆ.

ಸರ್ಕಾರವು ಅಂತಹ ಒಟ್ಟು 75 ರೈಲುಗಳನ್ನು ಹೊಂದಲು ಯೋಜಿಸಿದೆ ಎಂದು ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಮೈಸೂರು ದಸರಾ – ಮನೆ ಮನಗಳಲ್ಲಿ ಗೊಂಬೆಗಳ ಸಡಗರ

ವಂದೇ ಭಾರತ್ ಎಕ್ಸ್ ಪ್ರೆಸ್ ಹೈಸ್ಪೀಡ್ ರೈಲು ಗಂಟೆಗೆ 160 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ, ಮತ್ತು ಇದು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ಪಡೆಯಬಹುದು.

Share This Article
Leave a comment