ರೈತರಿಂದ ಖರೀದಿಸುವ ಹಾಲಿನ ದರ 1.75ರು ಕಡಿತ – ಮನ್ ಮುಲ್

Team Newsnap
1 Min Read

ಮಂಡ್ಯ: ರೈತರಿಂದ ಖರೀದಿಸುವ ಹಾಲಿನ ದರವನ್ನು ನಿನ್ನೆಯಿಂದಲೇ (ಜು.15) ಪ್ರತಿ ಲೀಟರ್‌ಗೆ 1.75 ರೂ.ಗಳನ್ನು ಮಂಡ್ಯ ಹಾಲು ಒಕ್ಕೂಟವು ಕಡಿತಗೊಳಿಸಿದೆ.

ಜು.13ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಸಮತೋಲನದಲ್ಲಿರಿಸುವ ದೃಷ್ಟಿಯಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1.75 ಇಳಿಸಿ ದರ ಪರಿಷ್ಕರಣೆ ಮಾಡಲಾಗಿದೆ.

ಈ ವಿಷಯವನ್ನು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿ ಸಂಘದಲ್ಲಿ ಸ್ಥಳೀಯ ಹಾಲು ಮಾರಾಟವನ್ನು 37 ರು . ದರ ಮುಂದುವರಿಸಿದೆ.

ಮನ್ ಮುಲ್ ನಿತ್ಯ 9,93,667 ಕೆಜಿ ಹಾಲನ್ನು ಉತ್ಪಾದಕರಿಂದ ಸಂಗ್ರಹಿಸುತ್ತಿದೆ. ಕಳೆದ ವರ್ಷದ ನ.1ರಿಂದ ಮಾ.25ರಿಂದ 1ರೂ ಸೇರಿದಂತೆ 2 ರೂ ಗಳನ್ನು ಮುಂಗಾರು ಪೂರ್ವ ಮಳೆ ಅರಂಭಕ್ಕೂ ಮುನ್ನಾ ಪ್ರೋತ್ಸಾಹಧನ ನೀಡುತ್ತಿದ್ದ ಒಕ್ಕೂಟ ಕೇವಲ 25 ಪೈಸೆ ಬಿಟ್ಟು ದರ ಇಳಿಸಿದೆ.

ಶೇ‌.4.0 ಜಿಡ್ಡು ಮತ್ತು ಶೇ. 8.5 ಜಿಡ್ಡೇತರ ಘನಾಂಶದ ಹಾಲಿನ ಗುಣಮಟ್ಟಕ್ಕೆ ಪ್ರತಿ ಕೆಜಿಗೆ 33.15ರು ಇದ್ದ ಪ್ರಸ್ತುತ ದರವಿದ್ದ ಸಂಘಗಳಿಗೆ 31.40 ರು ಗೆ ಇಳಿಸಿದೆ. ಉತ್ಪಾದಕರಿಗೆ ಪ್ರತಿ‌ ಕೆಜಿಗೆ 32.25 ರು ಇದ್ದ ದರವನ್ನು 30.50 ರೂ ಗೆ ಪರಿಷ್ಕರಿಸಿ ಜಾರಿಗೊಳಿಸಿದೆ.ಕೆಆರ್ ಎಸ್ ಹಿನ್ನೀರು: ಮೀನಾಕ್ಷಿ ಪುರಂ ಬಳಿ ನೀರಿನಲ್ಲಿ ಮುಳಗಿ ಮೂವರು ವಿದ್ಯಾರ್ಥಿಗಳ ಸಾವು

ಮುಂಗಾರು ಮಳೆಯೇ ಇನ್ನೂ ಸರಿಯಾಗಿ ಆಗುತ್ತಿಲ್ಲ. ಬಿತ್ತನೆ ಕಾರ್ಯ ಕುಂಠಿತವಾಗಿದೆ. ಇದೇ ಸ್ಥಿತಿ ಮುಂದುವರಿದರೆ, ಮೇವಿಗೂ ತತ್ವಾರ ಉಂಟಾಗಬಹುದು. ಪರಿಸ್ಥಿತಿ ಹೀಗಿರುವಾಗ, ಏಕಾಏಕಿ ಪ್ರತಿ ಲೀಟರ್‌ಗೆ 1.75 ರು ಕಡಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Share This Article
Leave a comment