ಕೆಆರ್ ಎಸ್ ಹಿನ್ನೀರು: ಮೀನಾಕ್ಷಿ ಪುರಂ ಬಳಿ ನೀರಿನಲ್ಲಿ ಮುಳಗಿ ಮೂವರು ವಿದ್ಯಾರ್ಥಿಗಳ ಸಾವು

Team Newsnap
0 Min Read

ಕೆಆರ್ ಎಸ್ ಹಿನ್ನೀರು ಮೀನಾಕ್ಷಿಪುರ ಬಳಿ ಶನಿವಾರ ಸಂಜೆ ಮೂವರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ.

ಪಡುವಾರಳ್ಳಿಯ ಭರತ್ (20), ರಾಮಕೃಷ್ಣನಗರದ ಪ್ರವೀಣ್ (20) ಮತ್ತು ಹೆಬ್ಬಾಳದ ವರುಣ್ (21) ಮೃತ ದುರ್ದೈವಿಗಳು.

ಮನೋಜ್ ಮತ್ತು ವಿಘ್ನೇಶ್ ನೀರಿನಲ್ಲಿ ಮುಳುಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾಗಿದ್ದರು.

ಈ ಎಲ್ಲಾ ವಿದ್ಯಾರ್ಥಿಗಳು ಬೈಕ್‌ಗಳಲ್ಲಿ ಬಂದಿದ್ದರು ಹಿನ್ನಿರಿನಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ಭರತ್ ಮೃತದೇಹವನ್ನು ಹೊರತೆಗೆದಿದ್ದಾರೆ. ಇನ್ನೆರಡು ಶವಗಳನ್ನು ಅವರು ಇನ್ನೂ ಪತ್ತೆಯಾಗಿಲ್ಲ .ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a comment