November 18, 2024

Newsnap Kannada

The World at your finger tips!

berries

ವಸಂತ ಆಗಮನಕ್ಕೆ ಸಿದ್ದತೆ : ಬೇಸಿಗೆಯ (Summer) ಆಹಾರ -ಆರೋಗ್ಯ ಹೇಗಿರಬೇಕು ?

Spread the love

ನವ ವಸಂತದ(Summer) ಆಗಮನಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಚಳಿ ಇನ್ನೂ ರಗ್ಗು , ಸ್ವೆಟರ್ ಬಯಸುತ್ತದೆ . ಅದೇ ರೀತಿ ಮಧ್ಯಾಹ್ನದ ಬಿಸಿಲು ಚುರುಕು ಮುಟ್ಟಿಸುತ್ತದೆ.

ವಸಂತನ ಆಗಮನಕ್ಕೆ ಪ್ರಕೃತಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಬೇಸಿಗೆಯೂ ಭಯಂಕರವಾಗಿರುತ್ತದೆ ಎಂಬ ಭಯವೂ ಇದೆ.ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕಾಗಿಯೇ ತಜ್ಞರು ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇವು ದೇಹವು ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ.

So ವಸಂತ ಆಗಮನಕ್ಕೆ ಪ್ರಕೃತಿ ಹೇಗೆ ಸಿದ್ದತೆ ಮಾಡಿಕೊಳ್ಳುತ್ತದೆಯೋ ಹಾಗೆಯೇ ಬೇಸಿಗೆಯ ಆಹಾರ -ಆರೋಗ್ಯ ಹೇಗಿರಬೇಕು ? ಎಂಬ ಬಗ್ಗೆ Small tips.

ಬೇಸಗೆಯಲ್ಲಿ ಆಹಾರ, ಆರೋಗ್ಯದ ‌ಬಗ್ಗೆ ಇರಲಿ ಮುಂಜಾಗ್ರತೆ.

masala majjige

ಬೇಸಿಗೆ ಕಾಲದಲ್ಲಿ ಹೆಚ್ಚಿನ ತಿಂಡಿತಿನಿಸುಗಳು ಸಿಗುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಕರಿದಿರುವಂತಹ ತಿಂಡಿತಿನಿಸುಗಳನ್ನು ಕಡೆಗಣಿಸಬೇಕು. ಇದರಿಂದಾಗಿ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಹೊರಗೆ ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ದೇಹದ ಉಷ್ಣತೆಯೂ ಅಧಿಕವಾಗುತ್ತಿದೆ. ಅಲ್ಲದೇ ದೇಹದ ಉಷ್ಣತೆ ಸರಿಯಾಗಿಲ್ಲದೇ ಇದ್ದರೆ ಪಿತ್ತ ಸಮಸ್ಯೆ ಅಧಿಕವಾಗುವುದು. ಹೀಗಾಗಿ ಬೇಸಗೆಯಲ್ಲಿ ದೇಹದ ತಾಪಮಾನದ ಸಮತೋಲನ
ಬಹುಮುಖ್ಯ.

ಇದಕ್ಕಾಗಿ ಆಹಾರ ಕ್ರಮ, ನಿರಂತರ ವ್ಯಾಯಾಮದ ಜತೆಗೆ ಒಂದಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲೇಬೇಕು.

ಸೊಪ್ಪು, ಹಣ್ಣು, ತರಕಾರಿಗಳ ಸೇವನೆಗೆ ಆದ್ಯತೆ ನೀಡುವುದರ ಜತೆಗೆ ಸಾಕಷ್ಟು ನೀರು ಕುಡಿಯುವುದರಿಂದ ದೇಹವನ್ನು ತಂಪಾಗಿರಿಸಿಕೊಳ್ಳಬಹುದು.ಬೇಸಗೆಯಲ್ಲಿ

  • ಕಲ್ಲಂಗಡಿ (Water melon)
  • ಸೇಬು (Apple)
  • ಪಿಯರ್ಸ್‌ (Pears)
  • ಪ್ಲಮ್‌ (plum)
  • ಬೆರಿ (Berry)
  • ಕರ್ಬೂಜ (Musk melon)
  • ಸೌತೆಕಾಯಿ (Cucumber)
  • ಮೊಳಕೆ ಬರಿಸಿದ ಕಾಳುಗಳು ನಿತ್ಯದ ಬಳಕೆಯಲ್ಲಿರಲಿ.ಬೇಸಿಗೆಯಲ್ಲಿ ಮಜ್ಜಿಗೆ ಹಾಗೂ ಸಲಾಡ್ ಅತ್ಯುತ್ತಮ ಆಹಾರ.
watermelon

ದೇಹದ ಉಷ್ಣತೆ ಹೆಚ್ಚಿಸುವ ಅದರಲ್ಲೂ ಹುಳಿ ಆಹಾರ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಸಿಟ್ರಸ್‌ ಹಣ್ಣುಗಳು, ಹುಳಿಯಾದ ಟೊಮೆಟೋ, ಬೆಳ್ಳುಳ್ಳಿ, ಮೆಣಸು, ಚೀಸ್‌, ಚಿಕನ್‌ ಮೊದಲಾದವುಗಳ ಸೇವನೆ ಮಿತ ಪ್ರಮಾಣದಲ್ಲಿರಲಿ.

ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಬೇಸಗೆಯಲ್ಲಿ ಅತ್ಯಗತ್ಯ. ಜತೆಗೆ ತೆಂಗಿನ ಎಣ್ಣೆ ಹಚ್ಚಿ ಅಭ್ಯಂಜನ ಮಾಡುವುದು ಸೂಕ್ತ.ರಾಗಿಪಾನಕ, ಬಾಳೆಹಣ್ಣಿನ ರಸಾಯನ, ಮೂಲಂಗಿ ಪಚಡಿ, ಬಾರ್ಲಿ ಗಂಜಿ, ಅನ್ನದ ಗಂಜಿ ಸೇವಿಸುವುದು ಬಹಳ ಉತ್ತಮ

ಮುಂಜಾನೆ ಅಥವಾ ಸಂಜೆ ವೇಳೆ ವ್ಯಾಯಾಮ ಮಾಡಬಹುದು. ಬಿಸಿಲಿಗೆ ಹೋಗುವುದನ್ನು ಆದಷ್ಟು ತಪ್ಪಿಸಿ. ಹೆಚ್ಚು ತಣ್ಣನೆಯ ನೀರು,ಏಳನೀರು, ಕುಡಿಯುವುದು ಅದೇ ರೀತಿ ಹೆಚ್ಚು ಬಿಸಿ ನೀರು ಕುಡಿಯುವುದು ಬೇಸಗೆಯಲ್ಲಿ ಒಳ್ಳೆಯದಲ್ಲ. ಐಸ್‌ ಹಾಕಿದ ಪಾನೀಯಗಳ ಸೇವನೆಯನ್ನು ಬಿಡುವುದೊರಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳಿತು.

Copyright © All rights reserved Newsnap | Newsever by AF themes.
error: Content is protected !!