ಮೈಶುಗರ್ ಆರಂಭಕ್ಕೆ ಮುನ್ನುಡಿ : ಬಾಯ್ಲರ್ ಗೆ ಅಗ್ನಿಸ್ಪರ್ಶ ಮಾಡಿದ ಸಚಿವದ್ವಯರು

Team Newsnap
2 Min Read
Prelude to the start of Mysugar: Ministers lit the boiler

ಮಂಡ್ಯ : ಮಂಡ್ಯ ಮೈಶುಗರ್ ಕಾರ್ಖಾನೆ ಆರಂಭಕ್ಕೆ ಶುಕ್ರವಾರ ಬಾಯ್ಲರ್ ಗೆ ಅಗ್ನಿಸ್ಪರ್ಶ ಮಾಡಲಾಯಿತು.

ರಾಜ್ಯದ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಮೈ ಶುಗರ್ ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು, ಆದರೆ ಕಳೆದ ವರ್ಷ ಕಾರ್ಖಾನೆ ಆರಂಭಗೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಅರೆಯುವಿಕೆ ಸಾಧ್ಯವಾಗಿರಲಿಲ್ಲ.
ಇದೀಗ ಅವಧಿಗೆ ಮುನ್ನವೇ ಕಾರ್ಖಾನೆ ಆರಂಭಿಸಲು ನೂತನ ಸರ್ಕಾರ 50 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹಾಗೂ ಸಕ್ಕರೆ ಸಚಿವ ಶಿವನಂದ್ ಪಾಟೀಲ್ ಅವರು ಬಾಯ್ಲರ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು.

ಮೈಶುಗರ್‌ ಆವರಣದಲ್ಲಿ ವಿಶೇಷ ಪೂಜೆ ನಡೆಸಿ, ಕಾರ್ಖಾನೆ‌ ಆರಂಭಕ್ಕೆ ಅಡೆತಡೆಗಳು ಎದುರಾಗದಂತೆ ಪ್ರಾರ್ಥನೆ ಮಾಡಿದರು.

ಈ ವೇಳೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿ ಕಾರ್ಖಾನೆಗೆ ಬೇಕಾದ ಕಬ್ಬನ್ನು ರೈತರು ಕೊಡಬೇಕು.

ಹಣ ನೀಡುವ ಜವಬ್ದಾರಿ ನಮ್ಮದು. ಇತರೆ ಕಾರ್ಖಾನೆಗಳಲ್ಲಿ ಕೊಡುವ ಬೆಲೆಯನ್ನೇ ನಾವು ಕೊಡ್ತೀವಿ‌.
ಸಂಪೂರ್ಣ ವಿಶ್ವಾಸ ಇಟ್ಟು ಕಾರ್ಖಾನೆಗೆ ಕಬ್ಬು ಪೂರೈಸಿ ಎಂದು ಮನವಿ ಮಾಡಿದರು.

ಕಳೆದ ವರ್ಷ ಕಡಿಮೆ ಕಬ್ಬು ನುರಿಸಿರುವುದರಿಂದ ನಷ್ಟ ಆಗಿದೆ.ಈ ವರ್ಷ ಹೆಚ್ಚು ಕಬ್ಬು ನುರಿದರೆ ನಷ್ಟ ತಡೆಯಬಹುದು. ಮೈಶುಗರ್ ಕಾರ್ಖಾನೆಯಲ್ಲಿ ಕೆಲ ಸಮಸ್ಯೆಗಳಿವೆ ಅದನ್ನು ಬಗೆಹರಿಸುತ್ತೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಸರ್ಕಾರ ಮೊದಲ ಅನುದಾನ ನೀಡಿದೆ. ಇದಕ್ಕೆ ಜಿಲ್ಲೆಯ ರೈತರ ಪರವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮೈಶುಗರ್ ಪುನರಾರಂಭಿಸಲು 50 ಕೋಟಿ ಬಿಡುಗಡೆಯಾಗಿದೆ. ಯಾವುದೇ ಸಮಸ್ಯೆ ಬರದಂತೆ ಕಾರ್ಖಾನೆ ನಡೆಯಲಿದ್ದು, ಜೂನ್ ಅಂತ್ಯದಲ್ಲಿ ಕಬ್ಬು ನುರಿಯುವ ಕಾರ್ಯ ಆರಂಭವಾಗಲಿದೆ ಎಂದರು.ಬೆಂ-ಮೈ ಹೆದ್ದಾರಿಯಲ್ಲಿ ಕಾರು ಅಪಘಾತ – ಮೈಸೂರಿನ ಆರ್ ಬಿ ಐ ನೌಕರ ಸಾವು

ಶಾಸಕರಾದ ರವಿಕುಮಾರ್ ಗಣಿಗ, ರಮೇಶ್ ಬಾಬು ಬಂಡಿಸಿದ್ದೇಗೌಡ, ಸಕ್ಕರೆ ಕಾರ್ಖನೆಯ ವ್ಯವಸ್ಥಾಪಕ ನಿರ್ದೇಶಕ ಪಾಟಿಲ್ ಅಪ್ಪಸಾಹೇಬ್ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸೀಫ್, ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಉಪಸ್ಥಿತರಿದ್ದರು.

Share This Article
Leave a comment