ಬೆಂ-ಮೈ ಹೆದ್ದಾರಿಯಲ್ಲಿ ಕಾರು ಅಪಘಾತ – ಮೈಸೂರಿನ ಆರ್ ಬಿ ಐ ನೌಕರ ಸಾವು

Team Newsnap
1 Min Read
Car accident on Bng-Mys highway – Mysore RBI employee dies ಬೆಂ-ಮೈ ಹೆದ್ದಾರಿಯಲ್ಲಿ ಕಾರು ಅಪಘಾತ – ಮೈಸೂರಿನ ಆರ್ ಬಿ ಐ ನೌಕರ ಸಾವು

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಆರ್‌ಬಿಐ ನೌಕರ (RBI employee) ಸಾವನ್ನಪ್ಪಿರುವ ಘಟನೆ ರಾಮನಗರ ಬಳಿಯ ಜೈಪುರ ಗೇಟ್ ಬಳಿ ಶುಕ್ರವಾರ ಜರುಗಿದೆ

ಮೈಸೂರಿನ ಆರ್‌ಬಿಐ ನೌಕರ ಜಗದೀಶ್ (48) ಮೃತಪಟ್ಟಿದ್ದಾರೆ. ಪತ್ನಿ ನಂದಿತಾ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

WhatsApp Image 2023 06 16 at 1.28.28 PM

ಕ್ರೆಟಾ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದು ಕಾರು ಸರ್ವಿಸ್ ರಸ್ತೆಗೆ ಉರುಳಿದೆ.

ಈ ಘಟನೆಯಲ್ಲಿ ಜಗದೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಡಿಸಿಎಂ ಡಿ.ಕೆ ಶಿ ಐದು ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ

ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment