ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ತಮ್ಮ ಸರಳತೆಯಿಂದಲೇ ಹೆಸರಾದವರು. ಎಲ್ಲರೊಂದಾಗಿ ಬೆರೆಯುವ ಪವರ್ ಸ್ಟಾರ್.
ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಕುರಿಗಾಹಿಗಳ ಜೊತೆ ಕಾಲ ಕಳೆದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಅವರೊಂದಿಗೆ ಊಟ ಮಾಡಿ ಸರಳತೆಯನ್ನು ಪ್ರದರ್ಶನ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾನುವಾರ ಕೊಪ್ಪಳದ ಗಂಗಾವತಿ ಸನಿಹದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು. ಕೊರೋನಾ ನಿಯಮಗಳ ಕಾರಣಕ್ಕೆ ಪುನೀತ್ ರಾಜಕುಮಾರ್ ಗೆ ಪ್ರವೇಶಾವಕಾಶ ಸಿಗಲಿಲ್ಲ.
ಇದರಿಂದ ಬೇಸರಗೊಳ್ಳದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿದ ಪುನೀತ್ ರಾಜಕುಮಾರ್, ಗಂಗಾವತಿ ಸಮೀಪದ ಹಳ್ಳಿಗಳಿಗೆ ಭೇಟಿ ನೀಡಿದರು.
ಕುರಿಗಾಹಿಗಳ ಬಳಿ ತೆರಳಿದ ಪುನೀತ್ ಅವರ ಮಕ್ಕಳನ್ನು ಎತ್ತಿಮುದ್ದಾಡಿ ಅವರೊಂದಿಗೆ ಕಾಲ ಕಳೆದರು. ಮಾತ್ರವಲ್ಲ ಅವರೊಂದಿಗೆ ಕಂಬಳಿಯಲ್ಲಿ ಕೂತು ಸಂಗಟಿ ಹಾಲು ಸವಿದರು.
ಪುನೀತ್ ರಾಜಕುಮಾರ್ ಕುರಿಗಾಹಿಗಳೊಂದಿಗೆ ತೆಗೆಸಿಕೊಂಡಿರೋ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇತ್ತೀಚಿಗೆ ಸಕ್ರೆಬೈಲ್ ಆನೆ ಶಿಬಿರಕ್ಕೆ ತೆರಳಿದ್ದ ಪುನೀತ್ ರಾಜಕುಮಾರ್ ಮಾವುತರು ಹಾಗೂ ಅವರ ಕುಟುಂಬದೊಂದಿಗೆ ಕಾಲಕಳೆದಿದ್ದರು.
ಜೆಮ್ಸ್ ಚಿತ್ರೀಕರಣ ಮುಗಿಸಿರುವ ಪುನೀತ್ ರಾಜಕುಮಾರ್ ಹೊಂಬಾಳೆ ಫಿಲ್ಸ್ಮಂ ಜೊತೆ ದ್ವಿತ್ವ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್