December 25, 2024

Newsnap Kannada

The World at your finger tips!

fifgter

ವಿದ್ಯುತ್ ಅವಘಡ: ಫೈಟರ್ ಸಾವು

Spread the love

ರಾಮಗನಗರ ಜಿಲ್ಲೆಯ ಬಿಡದಿಯ ಈಗಲ್ ಟನ್ ರೆಸಾರ್ಟ್ ಬಳಿಯ ತೆಂಗಿನ ತೋಟದಲ್ಲಿ ಸೋಮವಾರ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಹೈಟೆನ್ಷನ್ ವೈರ್ ತಗುಲಿ ಫೈಟರ್ ವಿವೇಕ್ (೩೫) ಮೃತಪಟ್ಟಿದ್ದಾರೆ. ಈತ ತಮಿಳುನಾಡು ಮೂಲದ ವ್ಯಕ್ತಿ ಎನ್ನಲಾಗಿದೆ.


ಗುರುದೇಶಪಾಂಡೆ ನಿರ್ಮಾಣದ “ಲವ್ ಯೂ ರಚ್ಚು’ ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣ ವೇಳೆ ಸುಮಾರು ೧೧.೩೦ರ ಸಮಯದಲ್ಲಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆ ಚಿತ್ರ ಇದಾಗಿದೆ.

ವಿವೇಕ್ ಮೆಟಲ್‌ರೋಪ್ ಎಳೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಜಾಕೆಟ್‌ಹಾಕಿದ್ದರೂ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಫೈಟ್ ಮಾಸ್ಟರ್ ವಿನೋದ್ ಹಾಗೂ ಜೆಸಿಬಿ ಚಾಲಕನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಚಿತ್ರ ತಂಡದವರು ಸಾಕಷ್ಟು ಮುನ್ನೆಚ್ಚರಿಕೆಕ್ರಮ ತೆಗೆದುಕೊಂಡಿದ್ದರೆ ಈ ಅವಘಡ ನಡೆಯುತ್ತಿರಲಿಲ್ಲ ಎಂಬ ಮಾತು ಕೇಳಿಬಂದಿದೆ. ನಾಲ್ಕು ದಿನಗಳಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿರಲ್ಲ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Copyright © All rights reserved Newsnap | Newsever by AF themes.
error: Content is protected !!