ಅಸಮಾಧಾನ ನಿವಾರಣೆಗೆ ಯತ್ನಿಸುವೆ: ಸಿಎಂ ಬೊಮ್ಮಾಯಿ

Team Newsnap
1 Min Read
Congress leaders who day dream of power - CM ಅಧಿಕಾರದ ಹಗಲು ಕನಸು ಕಾಣುವ ಕಾಂಗ್ರೆಸ್ ನಾಯಕರು - ಸಿಎಂ

ಪಕ್ಷದಲ್ಲಿಸಣ್ಣಪುಟ್ಟ ಅಸಮಾಧಾನಗಳಿದ್ದು ಅವನ್ನು ಪರಿಹರಿಸಲು ಯತ್ನಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಅವರು ಸೋಮವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸ್ಥಾನ ಸಿಗದ ಹಿರಿಯ ಶಾಸಕ ರಾಮದಾಸ್ ಅಸಮಾಧಾನಗೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ರಾಮದಾಸ್ ತಮ್ಮ ಆತ್ಮೀಯ ಸ್ನೇಹಿತರು, ಈ ಪ್ರಕ್ರಿಯೆ (ಸಚಿವ ಸಂಪುಟ ರಚನೆ)ಯಲ್ಲಿದ್ದಾಗಲೂ ಸಂಪರ್ಕದಲ್ಲಿದ್ದೆ, ಅವರೊಂದಿಗೆ ಮಾತನಾಡುವೆ. ಹಲವಾರು ವಿಷಯಗಳು ಅವರಿಗೂ ಗೊತ್ತಿದೆ, ಯಾವರೀತಿಯಾಗಿದೆಯೆಂದು. ವಿಶೇಷವಾಗಿರುವಂತ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಆಗಿರುವಂತದ್ದು, ಹಿರಿಯ ರಾಜಕಾರಣಿಯಾಗಿ ಅವರು ಅರ್ಥಮಾಡಿಕೊಂಡಿದ್ದಾರೆ. ಎಲ್ಲವೂ ಸರಿಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸಚಿವ ಆನಂದ್ ಸಿಂಗ್ ಅವರ ಅತೃಪ್ತಿಗೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯಿಸಿ, ಆನಂದ್ ಸಿಂಗ್ ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದೇನೆ. ಮೊತ್ತೊಮ್ಮೆ ಅವರೊಂದಿಗೆ ಮಾತನಾಡುವೆ ಎಂದು ನುಡಿದರು.


ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಈ ವಿಷಯದಲ್ಲಿ ತಮಿಳುನಾಡು ಮಾಡುತ್ತಿರುವ ರಾಜಕಾರಣ ಸರಿಯಲ್ಲಎಂದ ಸಿಎಂ, ಈ ಯೋಜನೆ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ದೆಹಲಿ ಹೋಗುವುದಾಗಿ ತಿಳಿಸಿದರು. ಕಾವೇರಿ ನದಿ ನೀರಿನ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಂಡು ರಾಜಕೀಯ ಪಕ್ಷಗಳು ಅಧಿಕಾರ ಬಂದ ಉದಾಹರಣೆಗಳು ತಮಿಳುನಾಡಿನಲ್ಲಿದೆ.ಈಗಲೂ ಇಂಥ ರಾಜಕಾರಣ ಮುಂದುವರಿದೆ ಎಂದು ಟೀಕಿಸಿದ ಬೊಮ್ಮಾಯಿ, ರಾಜಕಾರಣಕ್ಕಿಂತ ಜನರ ಕಲ್ಯಾಣ ಮುಖ್ಯ ಎಂದರು.


ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಸಾಂಸ್ಕೃತಿಕನಗರಕ್ಕೆ ಬಂದ ಬಸವರಾಜ ಬೊಮ್ಮಾಯಿಗೆ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು. ಈ ವೇಳೆ ಮುಖ್ಯಮಂತ್ರಿಗಳೊAದಿಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ವಿ. ಸೋಮಣ್ಣ, ಡಾ.ಸುಧಾಕರ್, ಕೆ.ಸಿ. ನಾರಾಯಣಗೌಡ, ಶಾಸಕರಾದ ನಾಗೇಂದ್ರ, ಜಿ.ಟಿ.ದೇವೇಗೌಡ, ರೇಣುಕಾಚಾರ್ಯ ಇದ್ದರು.
ನಿರೀಕ್ಷೆಯಂತೆ ಸಚಿವ ಸ್ಥಾನ ವಂಚಿತರಾದ ಕೆ.ಆರ್. ಕ್ಷೇತ್ರದ ಶಾಸಕ ರಾಮದಾಸ್ ಅವರು ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಆಗಮಿಸಿರಲಿಲ್ಲ.

Share This Article
Leave a comment