ಎಸ್ ಎಸ್ ಎಲ್ ಸಿ ಫಲಿತಾಂಶ – ಶೇ. 99.99 ವಿದ್ಯಾರ್ಥಿಗಳು ಪಾಸ್ : ಸಚಿವ ನಾಗೇಶ್

Team Newsnap
1 Min Read

ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.99.99ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದ ಎಲ್ಲಾ ಹುಡುಗರು ಪಾಸ್ ಆಗಿದ್ದರೆ, ಓರ್ವ ವಿದ್ಯಾರ್ಥಿನಿಯನ್ನು ಬಿಟ್ಟು ಉಳಿದ ಎಲ್ಲಾ ವಿದ್ಯಾರ್ಥಿನಿಯರೂ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.

ಫ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿನಿಯೊಬ್ಬಳು ಬೇರೆ ವಿದ್ಯಾರ್ಥಿನಿಯನ್ನು ಪರೀಕ್ಷೆಯನ್ನು ಕಳುಹಿಸಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಒಟ್ಟು 8,71,443 ಮಕ್ಕಳು ಪರೀಕ್ಷೆ ಬರೆದಿದ್ದು, 8,71,442 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಂಪ್ಯೂಟರ್ ಮೌಲ್ಯಮಾಪನ ಮಾಡಲಾಗಿದೆ.

4,701,50 ವಿದ್ಯಾರ್ಥಿಗಳು, 4,01,281 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ ಎಂದು ತಿಳಿಸಿದರು.

ಎ + ಗ್ರೇಡ್ 1,28,931, ಎ ಗ್ರೇಡ್ 2,50,317, ಬಿ ಗ್ರೇಡ್ 2,87,684, ಸಿ ಗ್ರೇಡ್ 1,13,610 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ.9 ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಿ ಪಾಸ್ ಮಾಡಲಾಗಿದೆ.

157 ಮಕ್ಕಳು 625 ಕ್ಕೆ 625 ಅಂಕ ಪಡೆದರೆ, 289 ಮಕ್ಕಳು 623 ಅಂಕವನ್ನು ಪಡೆದಿದ್ದಾರೆ. 289 ಮಕ್ಕಳು 623 ಅಂಕ, ಇಬ್ಬರು 622 ಅಂಕ, 449 ಮಂದಿ 621 ಅಂಕ, 20 ಮಕ್ಕಳು 620 ಅಂಕಗಳನ್ನು ಪಡೆದಿದ್ದಾರೆ.

Share This Article
Leave a comment