ಬೂದನೂರು ಗ್ರಾಪಂ ನಿವೇಶನ ರಹಿತರ ಹೋರಾಟ ಡಿ 1 ಕ್ಕೆ ಮುಂದೂಡಿಕೆ – ಬಿ ಕೆ ಸತೀಶ್

Team Newsnap
1 Min Read

ನವೆಂಬರ್ 23 ರಿಂದ ತಹಶೀಲ್ದಾರ್ ಕಚೇರಿ ಮುಂಭಾಗ ಆರಂಭಿಸಲು ಉದ್ದೇಶಿಸಿದ್ದ ಬೂದನೂರು ಗ್ರಾಮ ಪಂಚಾಯತಿ ನಿವೇಶನರಹಿತರ ಅಹೋರಾತ್ರಿ‌ ಪ್ರತಿಭಟನೆಯನ್ನು ಅಧಿಕಾರಿಗಳ ಭರವಸೆ ಮೇರೆಗೆ ಡಿ.1ಕ್ಕೆ ಮುಂದೂಡಲಾಗಿದೆ

ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ‌ ಸಂಚಾಲಕ ಬಿ.ಕೆ.ಸತೀಶ ಈ ಈ ವಿಷಯ ತಿಳಿಸಿ, ತಾಲೂಕು ಆಡಳಿತ ಬಡ/ನಿರ್ಗತಿಕ ವಿರೋಧಿ ನೀತಿ‌ ಬಿಟ್ಟು‌ ಕಾನೂನಾತ್ಮಕವಾಗಿ ಭೂಮಿ‌ ಮಂಜೂರು ಮಾಡಬೇಕು. ಇಲ್ಲದಿದ್ದರೆ‌ ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಪುನರುಚ್ಚರಿಸಿದರು.

ಬೂದನೂರು ಗ್ರಾಮದ ಸರ್ವೇ ನಂ.190ರಲ್ಲಿ ದಾಖಲೆ ಇಲ್ಲದೆ ಒತ್ತುವರಿಗೊಂಡಿರುವ ಭೂಮಿಯನ್ನು ಸರ್ಕಾರಿ ಭೂಮಿ‌ ಎಂದು ನಮೂದಿಸದೆ ಒತ್ತುವರಿದಾರರ ಹೆಸರು ನಮೂದಿಸಿ ಕಬಳಿಕೆಗೆ ತಾಲ್ಲೂಕು‌ ಆಡಳಿತವೇ ಕುಮ್ಮಕ್ಕು ನೀಡಿ ದಲಿತ ಹಾಗೂ‌ ಹಿಂದೂಳಿದ ವರ್ಗದ ಬಡವರನ್ನು‌ ವಂಚಿಸಲಾಗುತ್ತಿದೆ ಎಂದರು.

ನಂ.54, 57 ಹಾಕಲು‌ ಇರಬೇಕಾದ ಅರ್ಹತೆಗಳೇ ಇಲ್ಲದವರಿಗೆ ಆಯ್ಕೆಗೆ ಮೊದಲೇ ಖುಷ್ಕಿ ಭೂಮಿ ಕಬಳಿಸಲು ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರು‌‌ ಮುಂದಾಗಿದ್ದು ಸದರಿ ಅಧಿಕಾರಿಗಳನ್ನು ಅಮಾನತುಪಡಿಸಲು‌ ಆಗ್ರಹಿಸಿದರು.

ಈ ಸಭೆಯಲ್ಲಿ‌ ಸವಿತಾ, ಕಾಮಾಕ್ಷಿ, ಸುಧಾ, ಭದ್ರಯ್ಯ, ವಿಕಲಚೇತನ ಗೋಪಾಲ್, ಸುಮತಿಕಾರ್ತಿಕ್, ಎಲ್ಲಮ್ಮ ಇದ್ದರು

Share This Article
Leave a comment