37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಮುಂದೂಡಿಕೆ

Team Newsnap
1 Min Read
Postponement of 37th State Conference of Journalists

ಪೂಜ್ಯನೀಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಏರುಪೇರಾಗಿರುವ ಕಾರಣ ವಿಜಯಪುರದಲ್ಲಿ
ಜನವರಿ 9&10 ರಂದು ನಡೆಯಲಿರುವ ಸಮ್ಮೇಳನ ಮುಂದೂಡುವ ಅನಿವಾರ್ಯತೆ ಎದುರಾಗಿದೆ.

ಕೋಟ್ಯಾಂತರ ಭಕ್ತಾದಿಗಳ ಪ್ರಾರ್ಥನೆಯಿಂದ ನಡೆದಾಡುವ ದೇವರು ಪೂಜ್ಯನೀಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸುಧಾರಿಸುತ್ತದೆ ಎನ್ನುವ ನಮ್ಮೆಲ್ಲರ ನಿರೀಕ್ಷೆ ಫಲಿಸುತ್ತಿಲ್ಲ. ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದು ಆತಂಕ ಮತ್ತು ಕಳವಳಕಾರಿಯಾಗಿದೆ.ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಸೇರಿ ‘ಡಿಎ, ಡಿಆರ್’ ಹೆಚ್ಚಳ?


ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಮ್ಮೇಳನವನ್ನು ನಡೆಸುವುದು ಕಷ್ಟವಾಗುವುದರಿಂದ ಸಮ್ಮೇಳನ ಮುಂದೂಡುವಂತೆ ಆತಿಥ್ಯ ವಹಿಸಿರುವ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ವಿನಂತಿಸಿಕೊಂಡಿದೆ.


ವಿಜಯಪುರ ಜಿಲ್ಲಾಡಳಿತ ಮತ್ತು ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯವೂ ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮುಂದೂಡುವುದು ಅನಿವಾರ್ಯವಾಗಿದೆ.
ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಸಮ್ಮೇಳನದ ಮುಂದಿನ ದಿನಾಂಕವನ್ನು ಶೀಘ್ರವಾಗಿ ತಿಳಿಸಲಾಗುವುದು.

ಜ.9ಕ್ಕೆ ಕೆಯುಡಬ್ಲ್ಯೂಜೆ ಸಭೆ:

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ)
ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರ ಸಭೆಗಳು ಮಾತ್ರ ಈಗಾಗಲೇ ನಿಗಧಿಯಾಗಿರುವಂತೆ ದಿನಾಂಕ 9.1.2023 ರಂದು ಸೋಮವಾರ (ವಿಜಯಪುರ ಬದಲಿಗೆ) ಹಾಸನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

Share This Article
Leave a comment