ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಸೇರಿ ‘ಡಿಎ, ಡಿಆರ್’ ಹೆಚ್ಚಳ?

Team Newsnap
2 Min Read

ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸರ್ಕಾರದಿಂದ ಸಿಹಿ ಸಂದೇಶ ಬರಲಿದೆ.

ನೌಕರರ ಸಂಘಗಳು ತಮ್ಮ ವೇತನದಲ್ಲಿನ ಫಿಟ್ಮೆಂಟ್ ಅಂಶವನ್ನು ಪರಿಷ್ಕರಿಸಬೇಕೆಂದು ದೀರ್ಘಕಾಲದಿಂದ ಒತ್ತಾಯಿಸುತ್ತಿವೆ.ಸುಮಲತಾ ಬಿಜೆಪಿ ಅಸೋಸಿಯೇಟ್‌ ಮೆಂಬರ್ – ಡಿಕೆಶಿ ವ್ಯಂಗ್ಯ

ಫಿಟ್ ಮೆಂಟ್ ಫ್ಯಾಕ್ಟರ್ ಒಂದು ಸಾಮಾನ್ಯ ಮೌಲ್ಯವಾಗಿದೆ. ಪ್ರಸ್ತುತ ಉದ್ಯೋಗಿಗಳ ಒಟ್ಟು ವೇತನವನ್ನ ಪಡೆಯಲು, ಅದನ್ನ ಮೂಲ ವೇತನದೊಂದಿಗೆ ಗುಣಿಸಲಾಗುತ್ತದೆ.

3.68 ಪಟ್ಟು ಬೇಡಿಕೆ :

ಕೇಂದ್ರ ಸರ್ಕಾರಿ ನೌಕರರ ಎಲ್ಲಾ ಗುಂಪುಗಳಿಗೆ ಸಾಮಾನ್ಯ ಫಿಟ್ಮೆಂಟ್ ಪ್ರಯೋಜನವು ಪ್ರಸ್ತುತ 2.57 ರಷ್ಟಿದೆ. ಪ್ರಸ್ತುತ, ಯಾರಾದರೂ 4200 ರೂ.ಗಳ ಗ್ರೇಡ್ ಪೇನಲ್ಲಿ 15,500 ರೂಪಾಯಿಗಳ ಮೂಲ ವೇತನವನ್ನು ಪಡೆಯುತ್ತಿದ್ದರೆ, ಅವರ ಒಟ್ಟು ವೇತನ 15,500×2.57 = 39,835 ರೂಪಾಯಿ. ಆದಾಗ್ಯೂ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ, ಫಿಟ್ಮೆಂಟ್ ಅಂಶವನ್ನ 2.57ರಿಂದ 3.68 ಪಟ್ಟು ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ.

ಫಿಟ್ಮೆಂಟ್ ಅಂಶವನ್ನುಹೆಚ್ಚಿಸಿದರೆ, ಅದು ಸರ್ಕಾರಿ ನೌಕರರ ಎಲ್ಲಾ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ.
ವೇತನ ಹೆಚ್ಚಳವು ಎಷ್ಟರ ಮಟ್ಟಿಗೆ ಇರುತ್ತದೆಯೆಂದ್ರೆ, ಕೇಂದ್ರವು ಫಿಟ್ಮೆಂಟ್ ಅಂಶವನ್ನು 3 ಪಟ್ಟು ಹೆಚ್ಚಿಸಿದರೆ, ಭತ್ಯೆಗಳನ್ನು ಹೊರತುಪಡಿಸಿದ ವೇತನವು 18,000 X 2.57 = 46,260 ರೂಪಾಯಿ. ಉದ್ಯೋಗಿಗಳ ಬೇಡಿಕೆಯಂತೆ ಫಿಟ್ ಮೆಂಟ್ ಹೆಚ್ಚಿಸಿದರೆ, ಆಗ ಸಂಬಳವು 26000 X 3.68 = ರೂಪಾಯಿ. ಇದು 95,680 ಆಗಿರುತ್ತದೆ.

ಕೇಂದ್ರವು 3 ಪಟ್ಟು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳಕ್ಕೆ ಒಪ್ಪಿದ್ರೆ, ಆಗ ಸಂಬಳವು 21000 X 3 = 63,000 ಆಗಿರುತ್ತದೆ. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ನೌಕರರ ವೇತನವು ಅವರ ಮೂಲ ವೇತನ, ಫಿಟ್ಮೆಂಟ್ ಮತ್ತು ಭತ್ಯೆಗಳನ್ನು ಆಧರಿಸಿರುತ್ತದೆ.

7ನೇ ವೇತನ ಆಯೋಗದ ಶಿಫಾರಸಿನಂತೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೇಂದ್ರವು ತನ್ನ ನೌಕರರ ತುಟ್ಟಿಭತ್ಯೆಯನ್ನ (ಡಿಎ) ಶೇ.34ರಿಂದ ಶೇ.38ಕ್ಕೆ ಹೆಚ್ಚಿಸಿತ್ತು. ಇದರೊಂದಿಗೆ, ಉದ್ಯೋಗಿಗಳು ಜುಲೈ 1, 2022 ರಿಂದ ಕ್ರಮವಾಗಿ ಹೆಚ್ಚಿನ ಪ್ರಮಾಣದ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನ ಪಡೆಯುತ್ತಿದ್ದಾರೆ.


ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ: ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ (ಡಿಆರ್) ಗಳನ್ನ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಇದನ್ನು ಜನವರಿ 1 ರಿಂದ ಜುಲೈ 1ರ ಮಧ್ಯೆ ಪರಿಷ್ಕರಿಸಲಾಗುವುದು. ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ಕಳೆದ ಏರಿಕೆಯಿಂದ ಪ್ರಯೋಜನ ಪಡೆದಿದ್ದಾರೆ. ಡಿಎಯಲ್ಲಿ ಶೇಕಡಾ 4ರಷ್ಟು ಹೆಚ್ಚಳದೊಂದಿಗೆ, ಇದು ಪ್ರಸ್ತುತ ಶೇಕಡಾ 38 ರಷ್ಟಿದೆ. ಇದಕ್ಕೂ ಮೊದಲು ಮಾರ್ಚ್ನಲ್ಲಿ, ಸರ್ಕಾರವು 7ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಡಿಎಯನ್ನು ಶೇ.3ರಷ್ಟು ಹೆಚ್ಚಿಸಿತ್ತು.

Share This Article
Leave a comment