May 21, 2022

Newsnap Kannada

The World at your finger tips!

WhatsApp Image 2022 04 05 at 7.24.38 AM

Post Wedding shoot: ನವ ವರ ಜಾರಿ ಬಿದ್ದು ಸಾವು – ವಧು ಆಸ್ಪತ್ರೆಗೆ ದಾಖಲು

Spread the love

ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ (Post Wedding shoot)ಮಾಡುವ ವೇಳೆ ವರ ಬಂಡೆಯಿಂದ ಜಾರಿಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

ನವ ವಧು, ವರ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿದ್ದರು. ಬಂಡೆ ಮೇಲೆ ನಿಂತು ಪೋಸ್ ಕೊಡುವ ವೇಳೆ ವರ ಜಾರಿ ನದಿಗೆ ಬಿದ್ದಿದ್ದಾನೆ. ಈ ವೇಳೆ ವಧು ಕೂಡ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ವಧುವನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವರ ಕೊನೆಯುಸಿರೆಳೆದ್ದಾನೆ.

ಮಾರ್ಚ್ 14 ರಂದು ದಂಪತಿಗಳು ವಿವಾಹವಾಗಿದ್ದರು. ಮೃತ ವರನನ್ನು ಪೆರಂಬ್ರಾ ಸಮೀಪದ ಕಡಿಯಂಗಡ್ ನಿವಾಸಿ, ರೆಜಿಲ್ ಎಂದು ಗುರುತಿಸಲಾಗಿದೆ.

ಪೆರುವಣ್ಣಮುಳಿ ಪೊಲೀಸರ ಮಾಹಿತಿಯಂತೆ, ಕುಟ್ಟಿಯಾಡಿ ನದಿ ನೀರಿನ ಅಡಿಯಲ್ಲಿ ಆಳವಾದ ಹೊಂಡವಿದೆ. ಈಜು ಬಾರದಿದ್ದ ರೆಜಿಲ್ ಗುಂಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ

ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸಿದ್ದಾರೆ.

error: Content is protected !!