ಬೆಂಗಳೂರಿನಲ್ಲಿ ಮುಂದುವರಿದ ಶ್ರೀಮಂತರ ಮಕ್ಕಳ ಶೋಕಿ: ಭೀಕರ ರಸ್ತೆ ಅಪಘಾತ : ಪೋರ್ಷ್ ಕಾರು ಚಿಂದಿ

Team Newsnap
1 Min Read

ಶ್ರೀಮಂತರ ಮಕ್ಕಳ ಶೋಕಿ ಯಿಂದಾಗಿ ವೇಗವಾಗಿ ಬಂದ ಪೋರ್ಷ್ ಕಾರು ಇಟಿಯೋಸ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಇಟಿಯೋಸ್ ಕಾರಿನ ಹಿಂಭಾಗ ಪುಡಿ ಪುಡಿ ಆಗಿ, ಎರಡೂ ಕಾರುಗಳು ಚಿಂದಿಯಾದ ಘಟನೆ ಬೆಂಗಳೂರಿನ ದೊಮ್ಮಲೂರು ರಸ್ತೆಯಲ್ಲಿ ಶನಿವಾರ ತಡ ರಾತ್ರಿ ಜರುಗಿದೆ.

ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಇಟಿಯೋಸ್​ ಕಾರಿಗೆ ಪೋರ್ಷ್​ ಕಾರು ಸವಾರ ಡಿಕ್ಕಿ ಹೊಡೆದಿದ್ದಾನೆ.

ಪೋರ್ಷ್​ ಕಾರು ಚಾಲಕ ಜುವೇರ್ ಎಡವಟ್ಟಿನಿಂದ ಕಮಾಂಡೋ ಆಸ್ಪತ್ರೆ ಬಳಿ ಘಟನೆ ನಡೆದಿದೆ. ಮೊದಲು ಇಟಿಯೋಸ್ ಕಾರಿಗೆ ಗುದ್ದಿ ಕಮಾಂಡೋ ಆಸ್ಪತ್ರೆಯ ಗೇಟಿಗೆ ಪೋರ್ಷ್​ ಕಾರು ಡಿಕ್ಕಿ ಹೊಡೆದಿದೆ.

ಮದ್ಯಪಾನ ಮಾಡಿ ಚಾಲಕ ನಿರ್ಲಕ್ಷದಿಂದಾಗಿ ವಾಹನ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮದ್ಯಪಾನ ಮಾಡಿ ಕಾರು ಚಲಾಯಿಸಿರುವ ಕುರಿತು ಅನುಮಾನ ಹಿನ್ನೆಲೆ ಚಾಲಕ ಜುವೇರ್​ನನ್ನು ವಶಕ್ಕೆ ಪಡೆದ ಪೊಲೀಸರು ಆತನ ರಕ್ತದ ಮಾದರಿಯನ್ನು ಕಲೆ ಹಾಕಿದ್ದಾರೆ. ಹಲಸೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲರೂ ಜಸ್ಟ್ ಮಿಸ್ :

ಈ ಅಪಘಾತದಲ್ಲಿ ಪೋರ್ಷ್​ ಕಾರಿನಲ್ಲಿದ್ದವರು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ. ಗುದ್ದಿದ ರಭಸಕ್ಕೆ ಕಾರಿನ ಪೆಟ್ರೋಲ್ ಟ್ಯಾಂಕ್ ಸಹ ಡ್ಯಾಮೇಜ್ ಆಗಿದೆ. ಅಪಘಾತದ ವೇಳೆ ಪೆಟ್ರೋಲ್ ಸೋರಿಕೆಯಾಗಿದ್ದರೆ ಕಾರು ಬೆಂಕಿಗಾಹುತಿಯಾಗಬೇಕಿತ್ತು, ಅದೃಷ್ಟವಶಾತ್​ ಬಚಾವ್​ ಆಗಿದ್ದಾರೆ.

ಗುದ್ದಿದ ರಭಸಕ್ಕೆ ಪೋರ್ಷ್ ಕಾರಿನ ಮುಂಭಾಗದ ಬಂಪರ್, ಇಂಜಿನ್, ಗೇರ್ ಬಾಕ್ಸ್ ಹಾಗೂ ಎರಡು ಚಕ್ರಗಳಿಗೆ ಹಾನಿಯಾಗಿದೆ. ಒಂದೂವರೆ ಕೋಟಿ ಮೌಲ್ಯದ ಪೋರ್ಷ್ ಕಂಪನಿಯ ರೇಸ್ ಕಾರು ಎರಡು ಆಸನಗಳನ್ನು ಮತ್ತು 3995 ಸಿಸಿಯ ಸಾಮರ್ಥ್ಯವನ್ನು ಹೊಂದಿದೆ.

Share This Article
Leave a comment