October 17, 2021

Newsnap Kannada

The World at your finger tips!

Pic Credits : deccanherald.com

ಬಿಜೆಪಿ ಸರ್ಕಾರದಂತಹ ದರಿದ್ರ, ತಾಲಿಬಾನಿ ಸರ್ಕಾರ ಇನ್ನೊಂದಿಲ್ಲ:- ಸಿದ್ದರಾಮಯ್ಯ

Spread the love

ಬಿಜೆಪಿ ಸರ್ಕಾರದಂತಹ ದರಿದ್ರ, ತಾಲಿಬಾನಿ ಸರ್ಕಾರ ಬೇರೊಂದಿಲ್ಲ. ಈ ಸರ್ಕಾರವನ್ನು ಕಿತ್ತು ಬಿಸಾಕಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.‌

ಬೆಂಗಳೂರಿನಲ್ಲಿ ದಿ. ಆರ್. ಗುಂಡೂರಾವ್ ಅವರ 84 ನೇ ಜನ್ಮದಿನಾಚರಣೆ ಹಾಗೂ ರೇಷನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದ ಸಿದ್ದರಾಮಯ್ಯ‌, ನಾನು ಏಳು ಕೆಜಿ ಅಕ್ಕಿ ಕೊಡ್ತಾ ಇದ್ದೆ. ಬಿಜೆಪಿ ಸರ್ಕಾರ ಬಂದು ಐದು ಕೆಜಿ ಕೊಡ್ತಾ ಇದ್ದಾರೆ. ಇವರಪ್ಪನ ಮನೆ ಗಂಟೇನು ಹೋಗುತ್ತೆ ಏಳು ಕೆಜಿ ಅಕ್ಕಿ ಕೊಟ್ರೆ? 7 ಕೆಜಿ ಕೊಟ್ಟಿದ್ದಕ್ಕೆ ಯಡಿಯೂರಪ್ಪ ಕೂಡ ಹೊಟ್ಟೆ ಉರ್ಕೊಂಡು ಬಿಟ್ರು. ನಮ್ಮ ಸರ್ಕಾರದ ಮತ್ತೆ ಬಂದ್ರೆ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಾರಿ ಹೇಳಿದರು.

ಬಿಜೆಪಿ ಅಂದ್ರೆ ಡೊಂಗಿಗಳು, ಬರಿ ಸುಳ್ಳು ಹೇಳುವುದೇ ಅವರ ಕೆಲಸ. ಕೆಲಸ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾರೆ. ಆದರೆ ರಾಜ್ಯ ಸರ್ಕಾರದಲ್ಲಿ ಒಬ್ಬನೆ ಒಬ್ಬ ಅಲ್ಪಸಂಖ್ಯಾತ ಮಂತ್ರಿ ಇಲ್ಲ. ಮುಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಬಿಜೆಪಿಗೆ ಗೊತ್ತೇ ಇಲ್ಲ. ಹಿಂಬಾಗಿಲ ಮೂಲಕ ಆಪರೇಶನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. 

ಆಪರೇಶನ್ ಮಾಡಿದ ಸರ್ಕಾರ ಮಾಡಿದ ಯಡಿಯೂರಪ್ಪ ನನ್ನು ಕಿತ್ತು ಹಾಕಿ, ಬೊಮ್ಮಾಯಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಬೊಮ್ಮಾಯಿ ಆರ್‍ಎಸ್‍ಎಸ್, ಯಡಿಯೂರಪ್ಪ ಹೇಳಿದಂತೆ ಕೇಳ್ತಾರೆ. ಇವರಿಂದ ಯಾವ ನಿರೀಕ್ಷೆಯನ್ನು ಮಾಡೋಕೆ ಸಾಧ್ಯವಿಲ್ಲ ಎಂದರು.

ಆರ್‍ಎಸ್‍ಎಸ್ ಅಂದ್ರೆ ಗೊತ್ತಾ? ಚಡ್ಡಿಗಳು ನಮ್ಮ ಕಾಲದಲ್ಲಿ ಚಡ್ಡಿಗಳು ಅಂತಿದ್ದರು. ಇವಾಗ ಪ್ಯಾಂಟ್ ಹಾಕ್ತಾರಾ ಎಂದು ನರೆದಿದ್ದ ಜನರನ್ನು ಪ್ರಶ್ನಿಸಿದರು. ಅವರು ದೇಶ ಭಕ್ತರಲ್ಲ. ಒಬ್ಬರಾದರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರಾ? ನರೇಂದ್ರ ಮೋದಿ ಏನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರಾ…? ಅವರು ಹುಟ್ಟೇ ಇರಲಿಲ್ಲ ಎಂದು ಆರ್‍ಎಸ್‍ಎಸ್ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

error: Content is protected !!