February 21, 2026

Newsnap Kannada

The World at your finger tips!

suman

ಖಡಕ್ ಎಸ್ಪಿ ಸುಮನ್ ಮಂಡ್ಯಕ್ಕೆ ಬರದಂತೆ ರಾಜಕಾರಣಿಗಳ ತಡೆ : ಸರ್ಕಾರದಿಂದಲೂ ಬ್ರೇಕ್

Spread the love

ಖಡಕ್ ಅಧಿಕಾರಿಯ ನೇಮಕಕ್ಕೆ ತಡೆ ಹಿಡಿದ ಸರ್ಕಾರ ಮಂಡ್ಯ ರಾಜಕಾರಣಿಗಳು ಒತ್ತಡಕ್ಕೆ ಮಣಿದು ಎಸ್ಪಿ ಸುಮನ್ ಡಿ ಪೆನ್ನೇಕರ್ ಮಂಡ್ಯಕ್ಕೆ ಬರುವುದನ್ನು ತಡೆಯುವ ಕುತಂತ್ರ ವ್ಯವಸ್ಥಿತವಾಗಿ ನಡೆದಿದೆ.

ಮಂಡ್ಯ ನೂತನ ಎಸ್‌ಪಿಯಾಗಿ ಸುಮನ್ ಡಿ ಪೆನ್ನೇಕರ್ ಇಂದು ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ದಕ್ಷ ಅಧಿಕಾರಿ ಸುಮನ್ ಆಗಮನಕ್ಕೆ ಬೆದರಿದ ಮಂಡ್ಯ ರಾಜಕಾರಣಿಗಳು ಈ ವರ್ಗಾವಣೆ ರದ್ದು ಮಾಡಿ, ಹೊಂದಾಣಿಕೆ ಮಾಡಿಕೊಂಡು ಹೋಗುವ ಅಧಿಕಾರಿಯೊಬ್ಬರನ್ನು ನೇಮಕ ಮಾಡಿಸುವ ಹುನ್ನಾರ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಅಧಿಕಾರ ಸ್ವೀಕರಿಸಬೇಕಿದ್ದ ಸುಮನ್ ಗೆ ಇನ್ನೂ 2 ದಿನ ಅಧಿಕಾರ ವಹಿಸಿಕೊಳ್ಳದಂತೆ ಸರ್ಕಾರದ ಡಿಪಿಎಆರ್‌ ವಿಭಾಗ ಮೌಖಿಕ ಸೂಚನೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ನಿನ್ನೆಯಷ್ಟೇ ಆಡಳಿತ ದೃಷ್ಟಿಯಿಂದ 9 ಮಂದಿ ಐಪಿಎಸ್‌ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಲಾಗಿತ್ತು. ಅದರಲ್ಲಿ ಮಂಡ್ಯ ಎಸ್‌ಪಿ ಸ್ಥಾನ ಕೂಡಾ ಒಂದು.

error: Content is protected !!