ಪಿಎಂ ಕೇರ್ಸ್ ಫಂಡ್: ರತನ್​ ಟಾಟಾ ಟ್ರಸ್ಟಿ, ಸಲಹೆಗಾರರಾಗಿ ಸುಧಾಮೂರ್ತಿ ನೇಮಕ 

Team Newsnap
1 Min Read

ಪಿಎಂ ಕೇರ್ಸ್ ಫಂಡ್​ಗೆ (PM-CARES) ಗೆ ಮೂವರು ಟ್ರಸ್ಟಿಗಳ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾ. ಕೆ.ಟಿ.ಥಾಮಸ್, ಲೋಕಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಕರಿಯಾ ಮುಂಡಾ, ಟಾಟಾ ಕಂಪನಿಯ ರತನ್ ‌ಟಾಟಾರನ್ನು ನೇಮಕ ಮಾಡಲಾಗಿದೆ.

ಪಿಎಂ ಕೇರ್ಸ್ ಫಂಡ್ ಸಲಹಾ ಮಂಡಳಿಗೆ ಮೂವರು ಗಣ್ಯರನ್ನ ನೇಮಕ ಮಾಡಲಾಗಿದೆ. ಇನ್ಫೋಸಿಸ್ ಫೌಂಡೇಶನ್ ಮಾಜಿ ಮುಖ್ಯಸ್ಥೆ ಸುಧಾ ಮೂರ್ತಿ, ಮಾಜಿ ಸಿಎಜಿ ರಾಜೀವ್ ಮೆಹರ್ಷಿ, ಟೆಕ್ ಫಾರ್ ಇಂಡಿಯಾ ಸಹ ಸಂಸ್ಥಾಪಕ ಆನಂದ್ ಶಾ ಅವರನ್ನೂ ಕೂಡ ಸಲಹಾ ಮಂಡಳಿಗೆ ಆಯ್ಕೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ PM-CARES ಬೋರ್ಡ್​ ಸಭೆ ನಡೆಯಿತು. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವರು, ಹಣಕಾಸು ಸಚಿವರು ಕೂಡ ಭಾಗಿಯಾಗಿದ್ದರು. ಪ್ರಧಾನಿ ಹಾಗೂ ಸಚಿವರ ಒಮ್ಮತದ ಮೇರೆಗೆ ಮೂವರನ್ನು ಆಯ್ಕೆ ಮಾಡಲಾಗಿದೆ.

ಪಿಎಂ ಕೇರ್ಸ್ ಫಂಡ್, ದೇಶದ 4,345 ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತಿದೆ. ಪಿಎಂ ಕೇರ್ಸ್ ಫಂಡ್ ಜನರ ಉದಾರ ದೇಣಿಗೆ ನೀಡಿದ್ದಕ್ಕೆ ನಿನ್ನೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವರೊಬ್ಬರ ಅಕ್ರಮ ಬಯಲು: ನಾಳೆ ಸದನದಲ್ಲೇ ಸ್ಪೋಟಕ ಬಾಂಬ್ ಸಿಡಿಸುವೆ – HDK

ತುರ್ತು ಸಂದರ್ಭ, ಸಂಕಷ್ಟದ ಪರಿಸ್ಥಿತಿಯಲ್ಲಿ ವಿಶಾಲ‌ ದೃಷ್ಟಿಕೋನದಿಂದ ಪರಿಣಾಮಕಾರಿ ಸ್ಪಂದಿಸುವ ಬಗ್ಗೆ ಚರ್ಚೆ ನಡೆದಿದೆ. ನೆರವು ನೀಡುವುದು ಮಾತ್ರವಲ್ಲದೆ, ಸಂಕಷ್ಟ ನಿವಾರಣೆ, ಸಾಮರ್ಥ್ಯ ವೃದ್ಧಿ ಬಗ್ಗೆ ಚರ್ಚೆ ಆಗಿದೆ.

ಹೊಸ ಟ್ರಸ್ಟಿಗಳು, ಸಲಹೆಗಾರರ ನೇಮಕದಿಂದ ಪಿಎಂ ಕೇರ್ಸ್ ಫಂಡ್​ಗೆ ದೂರದೃಷ್ಟಿ ಕಾರ್ಯಚಟುವಟಿಕೆ ನಿರ್ವಹಣೆ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Share This Article
Leave a comment