ದಿನಾ 6 ಕಿಲೋ ಮೀಟರ್​ ನಡೀಬೇಕು : ಶಾಲೆಗೆ ಬಸ್​ ಹಾಕಿಸಿ ಪ್ಲೀಸ್​​’- ಸಿಎಂಗೆ ಸೋಲಿಗ ಮಕ್ಕಳ ಮನವಿ

Team Newsnap
1 Min Read
Indefinite strike of government employees from tomorrow: Schools and colleges Bandh ನಾಳೆಯಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಶಾಲಾ-ಕಾಲೇಜುಗಳು ಬಂದ್

ಸಿಎಂ ಅಂಕಲ್ ನಾವು ಶಾಲೆಗೆ ಹೋಗಬೇಕು ಅಂದ್ರೆ 6ಕಿಮಿ ಕಾಡಿನಲ್ಲಿ ನಡೆದುಕೊಂಡು ಹೋಗಬೇಕು. ನಮ್ಮೂರಿಗೆ ಬಸ್​ ಹಾಕಿಸಿ ಎಂದು ಮುಖ್ಯಮಂತ್ರಿ ಬೊಮ್ಮಯಿಗೆ ಚಾಮರಾಜನಗರ ಜಿಲ್ಲೆ ಗಡಿ ಭಾಗದ ಬುಡಕಟ್ಟು ಸೋಲಿಗ ಮಕ್ಕಳ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.ರಾಜ್ಯಪಾಲ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಸಾವು: ತಪ್ಪಿದ ಅನಾಹುತ

ಹನೂರು ತಾಲೂಕು ಅರೆಕಡುವಿನದೊಡ್ಡಿ, ಕಂಬಿದೊಡ್ಡಿ ಸೋಲಿಗರ ಮಕ್ಕಳು, ಸಿಎಂ ಅಂಕಲ್ ನಾವು ಶಾಲೆಗೆ ಹೋಗಬೇಕು ಬಸ್‌ ಕಳಿಸಿಕೊಡಿ ಪ್ಲೀಸ್. ಬಸ್ ಹಾಕಲಿಲ್ಲ ಅಂದರೆ ನಾವು ಸ್ಕೂಲಿಗೆ ಹೋಗಲ್ಲ. ನೀವು ನಾಳೆ ಹನೂರಿಗೆ ಬಂದಾಗ ನಮಗೆ ಬಸ್ ಸೌಲಭ್ಯದ ಘೋಷಣೆ ಮಾಡಿ. ಇಲ್ಲಾ ಅಂದ್ರೆ ನಾವು ಶಾಲೆಗೆ ಹೋಗಲ್ಲ. ದಿನಾ ಮೂರರಿಂದ ಆರು ಕಿಲೋಮೀಟರ್ ಮೀಟರ್ ನಡೀಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬ್ಯಾಗ್ ಹೊತ್ತೊಕೊಂಡು ಹೋಗುತ್ತಾ 3 ಕಿಲೋ ಮೀಟರ್, ಬರ್ತಾ 3 ಕಿಲೋ ಮೀಟರ್ ನಡೀಬೇಕು. ಸುತ್ತ ಕಾಡಿರೋದ್ರಿಂದ ಕಾಡು ಪ್ರಾಣಿಗಳ ಭಯ ಇದೆ. ಮಳೆ ಬಂದರೆ ಬ್ಯಾಗು, ಬಟ್ಟೆ ಎಲ್ಲ ಹಾಳಾಗುತ್ತೆ. ಇಲ್ಲಿ ರಸ್ತೆ ಚೆನ್ನಾಗಿದೆ. ಆದರೆ ಬಸ್ ಮಾತ್ರ ಬರೋದಿಲ್ಲ. ಹನೂರಿಗೆ ಬಂದಾಗ ಬಸ್ ಸೌಲಭ್ಯ ಘೋಷಣೆ ಮಾಡಿ ಕೊಡಿ ಎಂದು ಮಕ್ಕಳು ಮನವಿ ಮಾಡಿದ್ದಾರೆ.

Share This Article
Leave a comment