ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಜರುಗಿದೆ.
ರವಿಕುಮಾರ್ ಎಸ್. ಕಾಳೆ ಮೃತಪಟ್ಟ ದುರ್ದೈವಿ ಚಾಲಕ. ಮಧ್ಯ ರಾತ್ರಿ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯಪಾಲರನ್ನು ಕರೆದುಕೊಂಡು ಹೋಗಲು ಚಾಲಕ ರವಿಕುಮಾರ್ ಬಂದಿದ್ದರು.ತಮಿಳು ನಟ ಶರತ್ ಕುಮಾರ್ ಆರೋಗ್ಯದಲ್ಲಿ ಏರುಪೇರು : ಅಪೋಲೋ ಆಸ್ಪತ್ರೆಗೆ ದಾಖಲು
ರಾಜ್ಯಪಾಲರನ್ನು ಕಾರಿನಲ್ಲಿ ಕರೆದೊಯ್ಯಲು ಸಿದ್ದತೆ ಮಾಡಿಕೊಳ್ಳುವ ವೇಳೆ ರವಿಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಹೃದಯಾಘಾತವೂ ಆಗಿದೆ. ಕೂಡಲೇ ಅವರನ್ನು ಆಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನಗಳು ನಡೆಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಬಳಿಕ ರಾಜ್ಯಪಾಲರು ಹೆಚ್ಚುವರಿ ವಾಹನ ಬಳಸಿಕೊಂಡು ರಾಜ್ಯಭವನಕ್ಕೆ ತೆರಳಿದರು. ರಾಜ್ಯಪಾಲರು ನಿಗದಿತ ಸಮಯಕ್ಕಿಂತ ಬೇಗ ಆಗಮಿಸಿದ್ದರೆ, ರವಿಕುಮಾರ್ ಅವರೇ ಕಾರು ಏರಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು.
- 8ನೇ ತರಗತಿ ವಿದ್ಯಾರ್ಥಿ Low ಬಿಪಿಯಿಂದ ಕುಸಿದು ಸಾವು
- ಮೈಸೂರು – ಕಲುಷಿತ ನೀರು ಸೇವಿಸಿ ಓರ್ವ ಸಾವು, 12 ಜನ ಅಸ್ವಸ್ಥ
- ಮಂಡ್ಯ ಭ್ರೂಣ ಹತ್ಯೆ ಪ್ರಕರಣ : ಆರು ಮಂದಿ ಬಂಧನ
- ನಟ ಕಿರಣ್ ರಾಜ್ ಕಾರು ಅಪಘಾತ : ಎದೆಗೆ ತೀವ್ರ ಪೆಟ್ಟು – ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಮುಡಾ ಹಗರಣ : 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
- ಮಾಧ್ಯಮಗಳ ಮೇಲೆ ನಿಷೇಧ ಹೇರುವಂತೆ ನಟ ದರ್ಶನ್ ಕೋರಿಕೆ