ಸಿಎಂ ಅಂಕಲ್ ನಾವು ಶಾಲೆಗೆ ಹೋಗಬೇಕು ಅಂದ್ರೆ 6ಕಿಮಿ ಕಾಡಿನಲ್ಲಿ ನಡೆದುಕೊಂಡು ಹೋಗಬೇಕು. ನಮ್ಮೂರಿಗೆ ಬಸ್ ಹಾಕಿಸಿ ಎಂದು ಮುಖ್ಯಮಂತ್ರಿ ಬೊಮ್ಮಯಿಗೆ ಚಾಮರಾಜನಗರ ಜಿಲ್ಲೆ ಗಡಿ ಭಾಗದ ಬುಡಕಟ್ಟು ಸೋಲಿಗ ಮಕ್ಕಳ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ರಾಜ್ಯಪಾಲ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಸಾವು: ತಪ್ಪಿದ ಅನಾಹುತ
ಹನೂರು ತಾಲೂಕು ಅರೆಕಡುವಿನದೊಡ್ಡಿ, ಕಂಬಿದೊಡ್ಡಿ ಸೋಲಿಗರ ಮಕ್ಕಳು, ಸಿಎಂ ಅಂಕಲ್ ನಾವು ಶಾಲೆಗೆ ಹೋಗಬೇಕು ಬಸ್ ಕಳಿಸಿಕೊಡಿ ಪ್ಲೀಸ್. ಬಸ್ ಹಾಕಲಿಲ್ಲ ಅಂದರೆ ನಾವು ಸ್ಕೂಲಿಗೆ ಹೋಗಲ್ಲ. ನೀವು ನಾಳೆ ಹನೂರಿಗೆ ಬಂದಾಗ ನಮಗೆ ಬಸ್ ಸೌಲಭ್ಯದ ಘೋಷಣೆ ಮಾಡಿ. ಇಲ್ಲಾ ಅಂದ್ರೆ ನಾವು ಶಾಲೆಗೆ ಹೋಗಲ್ಲ. ದಿನಾ ಮೂರರಿಂದ ಆರು ಕಿಲೋಮೀಟರ್ ಮೀಟರ್ ನಡೀಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬ್ಯಾಗ್ ಹೊತ್ತೊಕೊಂಡು ಹೋಗುತ್ತಾ 3 ಕಿಲೋ ಮೀಟರ್, ಬರ್ತಾ 3 ಕಿಲೋ ಮೀಟರ್ ನಡೀಬೇಕು. ಸುತ್ತ ಕಾಡಿರೋದ್ರಿಂದ ಕಾಡು ಪ್ರಾಣಿಗಳ ಭಯ ಇದೆ. ಮಳೆ ಬಂದರೆ ಬ್ಯಾಗು, ಬಟ್ಟೆ ಎಲ್ಲ ಹಾಳಾಗುತ್ತೆ. ಇಲ್ಲಿ ರಸ್ತೆ ಚೆನ್ನಾಗಿದೆ. ಆದರೆ ಬಸ್ ಮಾತ್ರ ಬರೋದಿಲ್ಲ. ಹನೂರಿಗೆ ಬಂದಾಗ ಬಸ್ ಸೌಲಭ್ಯ ಘೋಷಣೆ ಮಾಡಿ ಕೊಡಿ ಎಂದು ಮಕ್ಕಳು ಮನವಿ ಮಾಡಿದ್ದಾರೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು