ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಉದ್ಯಮ ಶಕ್ತಿ ಯೋಜನೆಯಲ್ಲಿ ಪೆಟ್ರೋಲ್ ಬಂಕ್

Team Newsnap
1 Min Read
Petrol station in Udya Shakti Yojana for Women of Streeshakti Sangha's ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಉದ್ಯಮ ಶಕ್ತಿ ಯೋಜನೆಯಲ್ಲಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಸ್ವಸಹಾಯ ಸಂಘಗಳಿಗೆ ನೆರವಾಗಲು ಉದ್ಯಮ ಶಕ್ತಿ ಯೋಜನೆ ಜಾರಿಗೊಳಿಸುವುದಾಗಿ ಹೇಳಲಾಗಿದೆ.

ತೈಲ ಕಂಪನಿಗಳ ಸಹ ಯೋಗದಲ್ಲಿ ಉದ್ಯಮ ಶಕ್ತಿ ಯೋಜನೆ ಜಾರಿ ಮಾಡಲಿದೆ. , ಸ್ತ್ರೀ ಸ್ವಸಹಾಯ ಸಂಘಗಳಿಗೆ ನೆರವಾಗಲು 100 ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸಲಾಗುವುದು.

ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದಲ್ಲಿ ರಾಜ್ಯ ಸರ್ಕಾರದಿಂದ ಉದ್ಯಮ ಶಕ್ತಿ ಯೋಜನೆ ಜಾರಿಗೊಳಿಸಲಿದೆ, 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸುವುದಾಗಿ ಹೇಳಲಾಗಿದೆ.ಸಿಎಂ ಸಿದ್ದು ಆರೋಗ್ಯದಲ್ಲಿ ಏರು ಪೇರು- ಭೇಟಿಗಾಗಿ ಬಂದಿದ್ದ ಅಧಿಕಾರಿಗಳು ವಾಪಸ್ಸು

ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಪೆಟ್ರೋಲ್ ಬಂಕ್ ಗಳನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಪೆಟ್ರೋಲ್ ಬಂಕ್ ಸ್ಥಾಪನೆಗೆ ಭೂಮಿ ಒದಗಿಸುವ ಜೊತೆಗೆ ತರಬೇತಿ ಪರವಾನಿಗೆ ಇತರೆ ಬೆಂಬಲ ನೀಡಲಿದೆ. ಪೆಟ್ರೋಲಿಯಂ ಕಂಪನಿಗಳು ಬಂಡವಾಳ ಹೂಡಲಿವೆ ಎಂದು ಹೇಳಲಾಗಿದೆ.

Share This Article
Leave a comment