ಮಂಡ್ಯ ಪಿಇಎಸ್ ಎಂಜನೀಯರಿಂಗ್ ಕಾಲೇಜಿನ ಪದವಿ ಸಮಾರಂಭ
ನವೆಂಬರ್ 21 ರಂದು ಕಾಲೇಜಿನ ಎಂ.ಬಿ.ಎ ಬ್ಲಾಕ್‌ನಲ್ಲಿ ಜರುಗಲಿದೆ ಎಂದು ಪ್ರಾಂಶುಪಾಲ ಡಾ. ಎಚ್ . ವಿ. ರವೀಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಈ ಕಾರ್ಯಕ್ರಮದಲ್ಲಿ ಪಿಇಟಿ ಸಂಸ್ಥೆ ಯ ಅಧ್ಯಕ್ಷ ವಿಜಯಾನಂದ
“ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜುಕೇಶನ್” (ಐ.ಎಸ್.ಟಿ.ಇ) ಅಧ್ಯಾಯಗಳ ಸಮಾಚಾರ ಪತ್ರಿಕೆ “ಯುರೇಕಾ” ಸಂಪುಟ 14 ಅನ್ನು ಪಿ. ಟಿ.ಆರ್ (ಆರ್) ಬಿಡುಗಡೆ ಮಾಡಲಿದ್ದಾರೆ.
ಐ.ಎಸ್.ಟಿ.ಇ ದತ್ತಿ ಪ್ರಶಸ್ತಿಗಳಾದ ಬಿ.ಎಲ್. ಸತ್ಯನಾರಾಯಣ ಸ್ಮಾರಕ ದತ್ತಿ ಪದಕ” (ಡಾ.ಬಿ.ಎಸ್.ಶಿವಕುಮಾರ ಪ್ರಾಯೋಜಿಸಿದ) ಮತ್ತು “ಶ್ರೀಮತಿ ಪುಟ್ಟಲಿಂಗಮ್ಮ ಮತ್ತು ದಿವಂಗತ ಶ್ರೀ ಹೊನ್ನೇಗೌಡ ದತ್ತಿ ಪದಕ” (ಶ್ರೀ ಎಂ. ಶಂಕರಗೌಡ ಪ್ರಾಯೋಜಿಸಿದ) ಗಳನ್ನು ಪ್ರಶಂಸನೀಯ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಅತಿಥಿಗಳಾಗಿ ಡಾ.ಬಿ.ಆರ್.ರವಿಕಾಂತೇಗೌಡ, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತ (ಸಂಚಾರ), ಬೆಂಗಳೂರು ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ ರವೀಂದ್ರ ಹಾಗೂ ಇತರ ಅತಿಥಿಗಳು “ಉದ್ಯಮ-ಸಂಸ್ಥೆ ಸಂವಹನ ಕೋಶ” ಮತ್ತು “ಟೆಕ್ವಿಪ್ ಹಂತ–3” ಜಂಟಿಯಾಗಿ ಆಯೋಜಿಸಿರುವ “ನವೀನ ತಾಂತ್ರಿಕ ಯೋಜನೆಗಳ ಸ್ಪರ್ಧೆ – 2020” ವಿಜೇತರಿಗೆ ಬಹುಮಾನಗಳನ್ನು ವಿತರಿಸುತ್ತಾರೆ.
ಡೀನ್ (ಐ.ಐ.ಐ) ಮತ್ತು ಐ.ಎಸ್.ಟಿ.ಇ ಅಧ್ಯಾಯನದ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ, ಟೆಕ್ವಿಪ್ ಸಂಯೋಜಕ ಡಾ.ಬಿ. ದಿನೇಶ್ ಪ್ರಭು, ಐ.ಎಸ್.ಟಿ.ಇ ಅಧ್ಯಾಯದ ಕಾರ್ಯದರ್ಶಿ ಡಾ.ಎಂ.ಎನ್ ವೀಣಾ ಮತ್ತು “ಯುರೇಕಾ” ಸಂಪಾದಕಿ ಶೀಮತಿ ಪೂಜಾ ನಾಗಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ