ಗಮ್ ಹಾಕಿದ ಡಿಕೆಶಿ- PayCM ಪೋಸ್ಟರ್ ಅಂಟಿಸಿದ ಸಿದ್ದು: ಪೋಸ್ಟರ್ ಕಿತ್ತು ಬೀಸಾಡಿದ ಪೋಲಿಸರು

Team Newsnap
1 Min Read
PayCM Poster by DKshi Sidhu: Police Tore Off The Poster ಗಮ್ ಹಾಕಿದ ಡಿಕೆಶಿ- PayCM ಪೋಸ್ಟರ್ ಅಂಟಿಸಿದ ಸಿದ್ದು: ಪೋಸ್ಟರ್ ಕಿತ್ತು ಬೀಸಾಡಿದ ಪೋಲಿಸರು

ಪೇ ಸಿಎಂ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್​ ಕಾರ್ಯಕರ್ತರ ಬಂಧನ ಖಂಡಿಸಿ ಶುಕ್ರವಾರ ಕೈ​ ಮುಖಂಡರೇ ಬೀದಿಗೆ ಇಳಿದಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕ ರಂದೀಪ್ ಸುರ್ಜೆವಾಲ ನೇತೃತ್ವದಲ್ಲಿ ಪೋಸ್ಟರ್ ಅಂಟಿಸಿ ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಸ್ವಾಮೀಜಿ ಬೇಲ್ ತಿರಸ್ಕರಿಸಿದ ಚಿತ್ರದುರ್ಗ ಕೋರ್ಟ್

ಬೆಂಗಳೂರಿನ ರೇಸ್​ಕೋರ್ಸ್​ ರಸ್ತೆ ಬದಿಯಲ್ಲಿ ಕಾಂಗ್ರೆಸ್​ ನಾಯಕರು ಪೋಸ್ಟರ್ ಅಂಟಿಸಲು ಮುಂದಾಗಿ ಡಿ.ಕೆ.ಶಿವಕುಮಾರ್ ಗೋಡೆಗೆ ಗಮ್ ಹಚ್ಚಿ ಕೊಟ್ಟರೆ, ಸಿದ್ದರಾಮಯ್ಯ ಪೋಸ್ಟರ್​ ಅಂಟಿಸಿದರು.

ಕಾಂಗ್ರೆಸ್​ನ ಪೋಸ್ಟರ್ ಅಭಿಯಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪೊಲೀಸರು, ಸಿದ್ದರಾಮಯ್ಯ ಪೋಸ್ಟರ್ ಅಂಟಿಸುತ್ತಿದ್ದಂತೆಯೇ ಕಿತ್ತು ಬೀಸಾಡಿದರು.

ಈ ವೇಳೆ ಕಾರ್ಯಕರ್ತರ ನೂಕು ನುಗ್ಗಾಟ ನಡೆಯಿತು. ನಂತರ ಪೊಲೀಸರು ಮುಂಜಾಗೃತ ಕ್ರಮವಾಗಿ ಕಾಂಗ್ರೆಸ್​ ಮುಖಂಡರನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Share This Article
Leave a comment