ಹಾಸ್ಟೆಲ್ ನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮೇಲೆ ಬಂಧನಕ್ಕೊಳಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗೆ ಜಾಮೀನು ಅರ್ಜಿಯನ್ನು ಗುರುವಾರ ಚಿತ್ರದುರ್ಗ ನ್ಯಾಯಾಲಯ ತಿರಸ್ಕರಿಸಿದೆ.
ಇದರಿಂದಾಗಿ ಸ್ವಾಮೀಜಿಗೆ ಜೈಲೇ ಗತಿಯಾಗಿದೆ.ಸುತ್ತೂರು ದೇಶಿಕೇಂದ್ರ ಶ್ರೀಗಳಿಂದ ಸೆ 28 ರಂದು ಶ್ರೀರಂಗಪಟ್ಟಣ ದಸರಾ ಉದ್ಘಾಟನೆ
ಜಾಮೀನು ಕೋರಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.
ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಸ್ವಾಮೀಜಿಗೆ ಬುಧವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿವಮೊಗ್ಗದಿಂದ ಇಂದು ಮತ್ತೆ ಚಿತ್ರದುರ್ಗಕ್ಕೆ ಕರೆತರಲಾಗಿತ್ತು.
ನ್ಯಾಯಾಲಯದ ಸೂಚನೆ ಮೇರೆಗೆ ಸ್ವಾಮೀಜಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ ಶಿವಮೂರ್ತಿ ಅವರನ್ನು ಪೊಲೀಸ್ ವಾಹನದಲ್ಲಿ ಚಿತ್ರದುರ್ಗದ ಕಾರಾಗೃಹದಿಂದ ಶಿವಮೊಗ್ಗ ಕಾರಾಗೃಹಕ್ಕೆ ಕರೆ ತರಲಾಯಿತು. ಬಳಿಕ ಅಲ್ಲಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
- ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
- ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
- ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ
- ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
- ಪತ್ರಕರ್ತ ಹೊನಕೆರೆ ನಂಜಂಡೇಗೌಡರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಕಟ
- ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ