ಪ್ರಿಯಕರನನ್ನು ಕೊಂದ ಪೋಷಕರು ಜೈಲಿನಲ್ಲಿ – ಮಗಳು ಮಾನ್ವಿತಾ ಬಾಲ ಮಂದಿರದಲ್ಲಿ ಆತ್ಮಹತ್ಯೆ

Team Newsnap
1 Min Read

ಮಂಡ್ಯ ನಗರಸಭೆ ಸ್ಥಾಯಿ ಅಧ್ಯಕ್ಷ ಶಿವಲಿಂಗು ಪುತ್ರಿ ಮಾನ್ವಿತಾ ಮಂಡ್ಯ ಬಾಲಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗಳ ಮಾನ್ವಿತಾಳ ಪ್ರಿಯಕರನನ್ನು ಏಪ್ರಿಲ್ 15 ರಂದು ಭೀಕರವಾಗಿ ಕೊಲೆ ಮಾಡಿದ ಆರೋಪದಲ್ಲಿ ಪೋಷಕರು ಜೈಲು ಸೇರಿದರೆ, ಇಂದು ಬಾಲ ಮಂದಿರದಲ್ಲಿದ್ದ ಮಗಳು ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾನು ಪ್ರೀತಿಸಿದ ಪ್ರಿಯಕರನನ್ನು ಮಾನ್ವಿತಾಳ ತಂದೆ- ತಾಯಿ ಸೇರಿದಂತೆ 17 ಜನರ ತಂಡ , ಭೀಕರವಾಗಿ ಹಲ್ಲೆ ಮಾಡಿದ್ದರು. ನಂತರ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಆ ಯುವಕ ಕೊನೆಯುಸಿರೆಳೆದಿದ್ದನು.

ಆನಂತರ ಕೊಲೆ ಆರೋಪದಲ್ಲಿ ಮಾನ್ವಿತಾಳ ಅಪ್ಪ ಶಿವಲಿಂಗು , ತಾಯಿ ಸೇರಿ 17 ಮಂದಿಯನ್ನು ಬಂಧಿಸಲಾಗಿತ್ತು. ಅವರೆಲ್ಲರೂ ಈಗ ಜೈಲು ಪಾಲಾಗಿದ್ದರು.

ಮಾನ್ವಿತಾ ಮಾತ್ರ ತನ್ನ ತಂದೆಯ ಮನೆಯಲ್ಲಿ ವಾಸ ಮಾಡಲು ಇಷ್ಟ ಪಡದೇ ಹೋದ ಹಿನ್ನೆಲೆಯಲ್ಲಿ ಆಕೆಗೆ ಕಲ್ಲಹಳ್ಳಿ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು.

ಜೀವನದಲ್ಲಿ ಆಕೆ ಖಿನ್ನತೆಗೆ ಒಳಗಾಗಿ ಇಂದು ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾಳೆ. ಮಂಡ್ಯ ಪಶ್ಚಿಮ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment