January 10, 2025

Newsnap Kannada

The World at your finger tips!

robert

ಪಾಂಡವಪುರ ಪತ್ರಕರ್ತ ಆಂಥೋಣಿ ರಾಬರ್ಟ್ ರಾಜ್ ಹೃದಯಾಘಾತದಿಂದ ನಿಧನ‌

Spread the love

ಪಾಂಡವಪುರ ತಾಲ್ಲೂಕಿನ
ಪತ್ರಕರ್ತ ಆಂಥೋಣಿ ರಾಬರ್ಟ್ ರಾಜ್ ಸೋಮಾರ ಸಂಜೆ 4ರ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನದರು.

ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳೂ ಸೇರಿದಂತೆ ಅಪಾರ ಗೆಳೆಯರು, ಬಂಧುಗಳನ್ನು ರಾಬರ್ಟ್ ಆಗಲಿದ್ದಾರೆ.

ಈ ದಿನ ಬೆಳಗ್ಗೆ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆದ ಸಭಾಂಗಣದಲ್ಲಿ ಶಾಸಕರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಲಘು ಹೃದಯಾಘಾತವಾಗಿತ್ತು.

ನಂತರ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರು ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ರಾಬರ್ಟ್‌ ಅಕಾಲಿಕ ನಿಧನಕ್ಕೆ ಮಂಡ್ಯ ಜಿಲ್ಲಾ ಕಾರ್ಯನಿರತ‌ ಪತ್ರಕರ್ತ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Copyright © All rights reserved Newsnap | Newsever by AF themes.
error: Content is protected !!