ದೆಹಲಿಯಲ್ಲಿ ಪಾಕಿಸ್ತಾನ ಉಗ್ರನ ಬಂಧನ : ಶಸ್ತ್ರಾಸ್ತ್ರ ವಶ

Team Newsnap
0 Min Read

ನವದೆಹಲಿಯ ಲಕ್ಷ್ಮೀ ನಗರದಲ್ಲಿ ಪಾಕಿಸ್ತಾನಿ ಉಗ್ರನನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್​ ಬಂಧಿಸಿದೆ.

ಬಂಧಿತನಿಂದ ಒಂದು AK-47 ರೈಫಲ್ ಮತ್ತು ಗ್ರೆನೇಡ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೊಹಮ್ಮದ್ ಅಶ್ರಫ್​ ಬಂಧಿತ ಉಗ್ರ. ಈತ ಮೂಲತಹ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದವನಾಗಿದ್ದಾನೆ.

ಲಕ್ಷ್ಮೀ ನಗರದ ರಮೇಶ್ ಪಾರ್ಕ್​​ನಲ್ಲಿ ಉಗ್ರನನ್ನು ಬಂಧಿಸಲಾಗಿದೆ. ಈತ ಭಾರತೀಯ ನಾಗರೀಕ ಎಂದು ಫೇಕ್​ ಐಡಿ ಬಳಸಿ ದೆಹಲಿಯಲ್ಲಿ ವಾಸವಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

60 ಸುತ್ತುಗಳ ಒಂದು AK-47 ರೈಫಲ್ ಜೊತೆಗೆ, ಮ್ಯಾಗಝೈನ್, ಹ್ಯಾಂಡ್ ಗ್ರೆನೇಡ್, 2 ವಿಶೇಷ ಪಿಸ್ತೂಲ್ ಬಂಧಿತ ಉಗ್ರನಿಂದ ವಶಪಡಿಸಿಕೊಳ್ಳಲಾಗಿದೆ.

Share This Article
Leave a comment