ಈ ಮಾಸಾಂತ್ಯಕ್ಕೆ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ- ಪೋಷಕರಿಗೆ ನಿರಾತಂಕ

Team Newsnap
1 Min Read

ಪೋಷಕರು ಇನ್ನು ಮುಂದೆ ನಿರಾತಂಕವಾಗಿರಬಹುದು. ಈ ತಿಂಗಳ ಅಂತ್ಯಕ್ಕೆ 2 ರಿಂದ 17 ವರ್ಷದೊಳಗಿನ ಮಕ್ಕಳಿಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಸಿಗಲಿದೆ.

ದೇಶದಲ್ಲಿ ಇದುವರೆಗೂ ಶೇಕಡಾ 60 ರಷ್ಟು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಅಂತಾ ಇತ್ತೀಚಿಗೆ ಐಸಿಎಂಆರ್‌ ನಡೆಸಿದ ಸಮೀಕ್ಷೆ ಹೇಳಿದೆ.

ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಅಂತಾನೂ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ದೇಶದ ಮಕ್ಕಳಿಗೆ ರಕ್ಷಾಕವಚವಾಗಿ ನಿಲ್ಲಲು ಕೋವ್ಯಾಕ್ಸಿನ್ ನಿಲ್ಲುವ ಸಾಧ್ಯತೆ ಇದೆ.

ಡ್ರಗ್ಸ್​ ಕಂಟ್ರೋಲ ಜನರಲ್ ಆಫ್ ಇಂಡಿಯಾ, 2 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಅನುಮತಿ ಕೊಟ್ಟಿದೆ.

ಭಾರತ್ ಬಯೋಟೆಕ್‌ನಿಂದ ಮಕ್ಕಳ ಲಸಿಕೆ ಪ್ರಯೋಗ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ವಯಸ್ಕರಂತೆಯೇ ಮಕ್ಕಳಲ್ಲಿ ಕೂಡ ಪರಿಣಾಮ ತೋರುತ್ತಿದೆ ಎಂಬ ಸಂಗತಿ ಹೊರಬಿದ್ದಿತ್ತು. ಜೊತೆಗೆ ಲಸಿಕೆಯ ಸುರಕ್ಷತೆ ಹಾಗೂ ರೋಗನಿರೋಧಕ ಶಕ್ತಿ ಮಕ್ಕಳಲ್ಲಿಯೂ ವಯಸ್ಕರಂತೆಯೇ ಇರಲಿದೆ ಎಂದು ತಿಳಿದುಬಂದಿತ್ತು. ಇದೀಗ ಈ ಲಸಿಕೆಯನ್ನು ಮಕ್ಕಳ ಮೇಲೆ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಸಿಕ್ಕಿದೆ.

ಇನ್ನು ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಗೊಳಿಸಿದ ಭಾರತ್ ಬಯೋಟೆಕ್, 18 ವರ್ಷದೊಳಗಿನವರಿಗೆ 2 ರಿಂದ 3 ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಿತ್ತು.

Share This Article
Leave a comment