ಪೇಷಾವರದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ಸ್ಫೋಟ: 7 ಸಾವು 123 ಮಂದಿಗೆ ಗಾಯ

Team Newsnap
1 Min Read

ಉತ್ತರ ಪಾಕಿಸ್ತಾನದ ಪೇಷಾವರದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ 123 ಗಾಯಗೊಂಡು 7 ಜನರು ಸಾವನ್ನಪ್ಪಿರುವ ಘಟನೆ ಮಂಗಳವಾರ ವರದಿಯಾಗಿದೆ.

ಈ ಧಾರ್ಮಿಕ ಶಾಲೆಯು ಪೇಷಾವರ ನಗರದ ದಕ್ಷಿಣ ಹೊರವಲಯದಲ್ಲಿರುವ ಪೇಶಾವರ ರಿಂಗ್ ರಸ್ತೆಯಲ್ಲಿದ್ದು, ಬೆಳಿಗ್ಗೆ ಮೊದಲ ಉಪನ್ಯಾಸದ ಸಮಯದಲ್ಲಿ ಸ್ಫೋಟ ಸಂಭವಿಸಿದೆ.

ಪೇಶಾರ್ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಅಲಿ ಗಂಡಾಪುರ ಅವರು ‘ಸೆಮಿನರಿ ಜಾಮಿಯಾ ಜುಬೈರಿಯಾ ಮದರಸಾದಲ್ಲಿ, ಬೆಳಿಗ್ಗೆ ಮೊದಲ ಉಪನ್ಯಾಸದ ವೇಳೆ ಧಾರ್ಮಿಕ ಕೇಂದ್ರದಲ್ಲಿ, ಸುಮಾರು 5-6 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಐಇಡಿ ಬಳಸಿ‌ ಚೀಲವೊಂದರಲ್ಲಿ ಇಡಲಾಗಿತ್ತು. ಈ ಚೀಲವೇ ಸ್ಪೋಟಕ್ಕೆ ಕಾರಣ’ ಎಂದು ಗೊತ್ತಾಗಿದೆ

ಸ್ಪೋಟದ ನಂತರ ಗಾಯಾಳುಗಳನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವಕ್ತಾರರಾದ ಮೊಹಮ್ಮದ್ ಅಸಿಮ್ ‘ಸುಮಾರು 123 ಜನ ಗಾಯಾಳುಗಳಾಗಿದ್ದಾರೆ ಹಾಗೂ 7 ಜನ ಮೃತರಾಗಿದ್ದಾರೆ. ಮೃತರಲ್ಲಿ ಮಕ್ಕಳೂ ಸೇರಿದ್ದಾರೆ’.

ಘಟನೆಯ ಬಗ್ಗೆ ಟ್ಟೀಟ್ ಮಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ‘ನಾನು ಸಂತ್ರಸ್ತರ ಕುಟುಂಬಗಳಿಗೆ ಮತ್ತು ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ. ಹೇಡಿತನದ ಅನಾಗರಿಕ ದಾಳಿಗೆ ಕಾರಣವಾದ ಭಯೋತ್ಪಾದಕರನ್ನು ನ್ಯಾಯಕ್ಕೆ ಶೀಘ್ರವಾಗಿ ತರಲಾಗುವುದು ಎಂದು ನನ್ನ ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ’ ಬರೆದುಕೊಂಡಿದ್ದಾರೆ.

Share This Article
Leave a comment