ರಾಜ್ಯ ಸರ್ಕಾರದಿಂದ ಆದೇಶ – ನಾಲ್ವರು IPS ಅಧಿಕಾರಿಗಳ ವರ್ಗಾವಣೆ

Team Newsnap
1 Min Read

ಬೆಂಗಳೂರು : ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರದಿಂದ ಅದೇಶಿಸಲಾಗಿದೆ.

ಐಪಿಎಸ್ ಅಧಿಕಾರಿ ಎಸ್ ಎನ್ ಸಿದ್ಧರಾಮಪ್ಪ ಅವರನ್ನು ಬೆಳಗಾವಿ ನಗರದ ಐಜಿಪಿ ಹಾಗೂ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.

ಸ್ಟೇಟ್ ಕ್ರೈಮ್ ರೆಕಾರ್ಡ್ ಬ್ಯೂರೋ ಎಸ್ಪಿಯಾಗಿದ್ದ ವರ್ತಿಕಾ ಕರಿಯರ್ ಅವರನ್ನು ಬೆಂಗಳೂರಿನ ಇಂಟರ್ನಲ್ ಸೆಕ್ಯೂರಿಟಿ ವಿಭಾಗದ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ಆಯ್ಕೆ ಮಾಡಲಾಗಿದೆ.

ಇಂಟರ್ನಲ್ ಸೆಕ್ಯೂರಿಟಿ ವಿಭಾಗದ ಎಸ್ಪಿ ಡಿ ಆರ್ ಗೌರಿ ಅವರನ್ನು ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿದೆ.‘ಶುಚಿ’ ಯೋಜನೆಗೆ ರೂ. 470 ಕೋಟಿ ಅನುದಾನ ಬಿಡುಗಡೆ – ಸಚಿವ ದಿನೇಶ್ ಗುಂಡೂರಾವ್

ಡಾ.ಅನೂಪ್ ಎ ಶೆಟ್ಟಿಯವರನ್ನು ಬೆಂಗಳೂರು ನಗರ ಆಡಳಿತದ ಡಿಸಿಪಿಯ ಸ್ಥಾನದಿಂದ ಸಿಐಟಿ ಸೈಬರ್ ಕ್ರೈಂ ವಿಭಾಗದ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ನೇಮಕ ಮಾಡಲಾಗಿದೆ.

Share This Article
Leave a comment