‘ಶುಚಿ’ ಯೋಜನೆಗೆ ರೂ. 470 ಕೋಟಿ ಅನುದಾನ ಬಿಡುಗಡೆ – ಸಚಿವ ದಿನೇಶ್ ಗುಂಡೂರಾವ್

Team Newsnap
1 Min Read
For 'Suchi' scheme 470 crore grant release :Dinesh Gundurao 'ಶುಚಿ' ಯೋಜನೆಗೆ ರೂ. 470 ಕೋಟಿ ಅನುದಾನ ಬಿಡುಗಡೆ - ಸಚಿವ ದಿನೇಶ್ ಗುಂಡೂರಾವ್

ಮಂಡ್ಯ: ಪ್ರಸ್ತಕ ಸಾಲಿನಲ್ಲಿ ಶಾಲಾ ಹೆಣ್ಣು ಮಕ್ಕಳಿಗೆ ‘ಶುಚಿ’ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ವಿತರಿಸಲಾಗುವುದು. ಇದಕ್ಕಾಗಿ ರೂ. 470 ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಶುಚಿ’ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಸಂಗ್ರಹಿಸಿ ಸರಬರಾಜು ಮಾಡಲು ಅಲ್ಪಾವಧಿ ಟೆಂಡರ್ ಅನ್ನು ಆಹ್ವಾನಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಇದರಂತೆ, ಕೆ.ಎಸ್.ಎಂ.ಎಸ್.ಸಿ.ಎಲ್. (Karnataka State Medical Supplies Corporation Limited) ವತಿಯಿಂದ ಶೀಘ್ರದಲ್ಲೇ ಅಲ್ಪಾವಧಿ ಟೆಂಡರ್ ಅನ್ನು ಕರೆಯಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 60 ದಿನಗಳಲ್ಲಿ ಸರಬರಾಜು ಪೂರ್ಣಗೊಳಿಸಲಾಗುವುದು. ಈ ಯೋಜನೆಯಡಿ ಒಟ್ಟು 19,29,355 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಶಾಲೆಯಲ್ಲಿ ಹೆಣ್ಣು ಮಕ್ಕಳು ಬಳಸಿದ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಒಂದು ಕಾಗದದಲ್ಲಿ ಸುತ್ತಿ ಸ್ಯಾನಿವೇಷ್ಟ್ ಬುಟ್ಟಿಯಲ್ಲಿ ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ಅಲ್ಲದೆ, ಬಳಸಿ ಪ್ಯಾಡ್ ಗಳ ಮೇಲೆ ವೈಜ್ಞಾನಿಕ ವಿಲೇವಾರಿ ಕುರಿತು ಸ್ಪಷ್ಟ ಮಾಹಿತಿ ಮತ್ತು ಚಿತ್ರಣ ನೀಡಲಾಗಿರುತ್ತದೆ ಎಂದು ಹೇಳಿದರು.ಶೀಘ್ರವೇ ಕೆ-ಸೆಟ್ ಪರೀಕ್ಷೆ – ಸಚಿವ ಸುಧಾಕರ್

ಅಲ್ಲದೆ, 2023-24ನೇ ಸಾಲಿನ ಸಂಗ್ರಹಣೆ ಮತ್ತು ಅನುಷ್ಠಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸದರಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆರೋಗ್ಯ ಇಲಾಖೆಯಡಿ ಆರೋಗ್ಯ ಕೇಂದ್ರ/ ಆಸ್ಪತ್ರೆಗಳಿಗೆ ಜೈವಿಕ ತ್ಯಾಜ್ಯದ ವಿಲೇವಾರಿ ಸೇವೆಯನ್ನು ಒದಗಿಸುತ್ತಿರುವ ಮಾನ್ಯತೆ ಪಡೆದ ಏಜೆನ್ಸಿ/ ಸಂಸ್ಥೆಗಳಿಂದ ಸದರಿ ಶಾಲಾ-ಕಾಲೇಜುಗಳಲ್ಲಿನ ಬಳಸಿದ ನ್ಯಾಪ್ಕಿನ್ ಪ್ಯಾಡ್ ಗಳ ವಿವೇವಾರಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

Share This Article
Leave a comment