ಕೃಷಿ ಕಾಯ್ದೆ ವಿರೋಧ : ಭಾರತ್ ಬಂದ್ ಗೆ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

Team Newsnap
1 Min Read

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ರದ್ದು ಮಾಡುವಂತೆ ಒತ್ತಾಯಿಸಿ ವಿವಿಧ ಸಂಘಟನೆ ಗಳು ಕರೆ ನೀಡಿರುವ ಭಾರತ್ ಬಂದ್ ಗೆ ಮಂಡ್ಯ ದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಡ್ಯದಲ್ಲಿ ಭಾರತ್ ಬಂದ್ ಕೆಲವು ಕಡೆ ಯಾವುದೇ ಎಫೆಕ್ಟ್ ಆಗಿಲ್ಲ. ಮತ್ತೆ ಕೆಲವು ಕಡೆ ಪ್ರತಿಭಟನಾ ಕಾರರು ಮಂಡ್ಯದ ಪ್ರಮುಖ ರಸ್ತೆ ಗಳಲ್ಲಿನ‌ ಅಂಗಡಿ ಮುಂಗಟ್ಟು ಗಳನ್ನು ಬಲವಂತವಾಗಿ ಮುಚ್ಚಿ ಸುವ ದೃಶ್ಯ ಕಂಡು ಬಂತು. ಕೆಎಸ್ ಆರ್ ಟಿಸಿ ಬಸ್ ಸಂಚಾರವೂ ಸಧ್ಯಕ್ಕೆ ನಿಂತಿದೆ.

ಬೆಳಿಗ್ಗೆಯಿಂದ ಮಂಡ್ಯದಲ್ಲಿ ಎಂದಿನಂತೆ ಜನ ಜೀವನ ಸಾಗಿತ್ತು.‌ ಹೊರ ಬಡಾವಣೆಗಳಲ್ಲಿ
ಹೋಟೆಲ್, ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಆರಂಭ ಆಟೋ, ಖಾಸಗಿ ಬಸ್ ಸಂಚಾರ ಸರಾಗವಾಗಿತ್ತು. ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಜನರು.

ಕೆಲವೆಡೆ ಪ್ರತಿಭಟನೆಗಳು ಆರಂಭವಾಗಿವೆ ಮಂಡ್ಯದಲ್ಲಿ ರೈತ ಸಂಘ, ಸಿಪಿಎಂ ಸೇರಿ ಹಲವು ಸಂಘನೆಗಳ ಬೆಂಬಲ ಸೂಚಿಸಿವೆ. ಪ್ರಮುಖ ರಸ್ತೆ, ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್. ಮುಂಜಾಗೃತ ಕ್ರಮವಾಗಿ ಪೊಲೀಸ್ ಭದ್ರತೆ.

ಬಂದ್ ಸಹಕಾರಕ್ಕೆ ಮನವಿ :

ಪ್ರತಿಭಟನೆಗೆ ಮುಂದಾಗಿರುವ ಸಂಘಟನೆಗಳ ನಾಯಕರು ಆಟೋ ಮೂಲಕ ಧ್ವನಿವರ್ಧಕ ದಲ್ಲಿ ಮನವಿ ಮಾಡಿ, ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಸಹಕರಿಸುವಂತೆ ಮನವಿ.

ಗೆಜ್ಜಲಗೆರೆಯಲ್ಲಿ ಗಾಂಧೀ ಪೋಟೋ ಇಟ್ಟು ಪ್ರತಿಭಟನೆ:

ರೈತ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ ಹಿನ್ನೆಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ರೈತ ಸಮೂಹವು ಹೆದ್ದಾರಿಯಲ್ಲಿ ಗಾಂಧೀಜಿ ಫೋಟೋ ಇಟ್ಟು ಪ್ರತಿಭಟನೆ ನಡೆಸುತ್ತಿದೆ.‌

ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ ರೈತರು.
ಹೆದ್ದಾರಿ ಮಧ್ಯೆ ಗಾಂಧೀಜಿಯವರ ಫೋಟೋ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಆಗ್ರಹ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a comment