ರಾಜ್ಯದಲ್ಲಿ ಮಹಾಮಳೆಯ ಕಾರಣದಿಂದ ಉತ್ತಮಗುಣಮಟ್ಟದ ಈರುಳ್ಳಿ ಬೆಲೆ ರೂ. 100 ರ ಗಡಿ ದಾಟಿದೆ. ಇದರಿಂದ ಗ್ರಾಹಕ ಮತ್ತು ವ್ಯಾಪಾರಸ್ಥ ವರ್ಗದವರು ಸಂಕಷ್ಟಕ್ಕೀಡಾಗಿದ್ದಾರೆ.
ಉತ್ತರ ಕರ್ನಾಟಕದ ವಿಜಾಪುರ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಹಾಗೂ ದಾವಣಗೆರಡ, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡಗಳಲ್ಲಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ಈ ಭಾಗಗಳಲ್ಲಿ ಮಳೆ ಅವ್ಯಾಹತವಾಗಿ ಬಿದ್ದು, ಬೆಳೆ ಎಲ್ಲ ನಾಶವಾಗಿರುವ ಕಾರಣ ಈರುಳ್ಳಿ ಬೆಲೆ ಹೆಚ್ಚಿದೆ. ಕೊರೋನಾದಿಂದ ಪ್ರತಿಯೊಬ್ಬರು ಉತ್ತಮ ಆಹಾರ ಪಡೆದುಕೊಳ್ಳಲು ಕಷ್ಟಪಡುತ್ತಿದ್ದಾರೆ. ಇಂತಹ ವೇಳೆಯಲ್ಲಿ ಪ್ರತೀ ಗ್ರಾಹಕರಿಗೆ ಈರುಳ್ಳಿಯ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ದೀಪಾವಳಿಯ ಸಮಯಕ್ಕೆ ಉತ್ತಮ ಗುಣಮಟ್ಟದ ಸಗಟು ಈರುಳ್ಳಿಯ ದರ 100ರಿಂದ 150ರೂ ಗಳಿಗೆ, ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಈಗಾಗಲೇ ಸಾಮಾನ್ಯ ಗುಣಮಟ್ಟದ ಈರುಳ್ಳಿಯ ಬೆಲೆಯೂ ಸಹ ಪ್ರತಿ ಕೆ.ಜಿ. ಗೆ 80 ರಿಂದ 90 ರೂಗಳ ವರೆಗೆ ಏರಿಕೆ ಕಂಡಿದೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ