ಗ್ರಾಮ ಪಂಚಾಯತಿ ಚುಣಾವಣೆ ನವೆಂಬರ್‌ನಲ್ಲಿ: ಚುಣಾವಣಾ ಆಯೋಗ

Team Newsnap
1 Min Read

ಗ್ರಾಮ ಪಮಚಾಯತಿಯ ಚುಣಾವಣೆಗಳನ್ನು ನವೆಂಬರ್‌ನಲ್ಲಿ ಹಮ್ಮಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುಣಾವಣಾ ಆಯೋಗದ ಪರ ವಕೀಲರು ಹೈಕೋರ್ಟ್‌ನಲ್ಲಿ ವಿಚಾರಣೆಯ ವೇಳೆ ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಕೊಂಡಯ್ಯ ಹಾಗೂ ಇತರರು, ಈಗಾಗಲೇ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಲ್ಲಿ ಆದಷ್ಟು ಬೇಗನೇ ಚುಣಾವಣೆ ನಡೆಸಲು ಚುಷಾವಣಾ ಆಯೋಗಕ್ಕೆ ಆದೇಶ ನೀಡುವಂತೆ ಹೈಕೋರ್ಟ್‌‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ಎ.ಎಸ್. ಓಕ್ ಅವರ ವಿಭಾಗೀಯ ಪೀಠ ನಡೆಸಿತು. ಆಗ ಚುಣಾವಣಾ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ‘ಚುಣಾವಣಾ ಆಯೋಗವು ಈಗಾಗಲೇ‌ ಎಲ್ಲ‌ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದೆ. ಬಹುತೇಕ‌ ಎಲ್ಲರೂ ಚುಣಾವಣೆ ನಡೆಸಬಹುದು. ಒಂದು ತಾಲೂಕಿನಲ್ಲಿ‌ ಎರಡು ಹಂತದ ಚುಣಾವಣೆ ನಡೆಸಲು ಚುಣಾವಣಾ ಆಯೋಗ ಆಯೋಜನೆ ರೂಪಿಸಿದೆ’ ಎಂದು‌ ಕೋರ್ಟ್‌ಗೆ ಮಾಹಿತಿ ನೀಡಿದರು.

TAGGED:
Share This Article
Leave a comment