ಕೋವಿಡ್ ಲಸಿಕೆಯ ಪ್ರಯೋಗದ ವೇಳೆ ಬ್ರೆಜಿಲ್‌ ಯುವಕ ಸಾವು

Team Newsnap
1 Min Read
source - google credits -elearning

ಮಹಾಮಾರಿ ಕೊರೋನಾದ ವಿರುದ್ಧ ಪ್ರಪಂಚದಾದ್ಯಂತ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿಯಲಾಗುತ್ತಿದೆ. ಇದೀಗ ಬ್ರೆಜಿಲ್‌ನ ಸ್ವಯಂಸೇವಕರೊಬ್ಬರು ಕೋವಿಡ್-19 ಪ್ರಾಯೋಗಿಕ ಲಸಿಕೆಯೊಂದರ ಕ್ಲಿನಿಕಲ್ ಟ್ರಯಲ್ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ಬುಧವಾರ ಬ್ರೆಜಿಲ್‌‌ನ ಆರೋಗ್ಯ ಪ್ರಾಧಿಕಾರ ಅನ್ವಿಸಾ ತಿಳಿಸಿದೆ‌.
ಆಸ್ಟ್ರೆಜೆನಿಕಾ ಎಂಬ ಔಷಧ ತಯಾರಕ ಸಂಸ್ಥೆ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕಂಡು ಹಿಡಿದ ಕೊವಿಡ್-19ಕ್ಕೆ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್‌ಗೆ ಒಳಪಡಿಸಲಾಗಿತ್ತು. ಇದೇ ವೇಳೆ ಸ್ವಯಂ ಸೇವಕ ಮೃತಪಟ್ಟಿದ್ದಾರೆ. ಆದರೆ ಸ್ವಯಂ ಸೇವಕರು ಲಸಿಕೆ ಪಡೆದಿದ್ದರೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ ಎಂದು ಹೇಳಲಾಗಿದೆ. ಸ್ವಯಂ ಸೇವಕ ಮೃತನಾದ ನಂತರವೂ ಲಸಿಕೆಯ ಕ್ಲಿಕಲ್ ಟ್ರಯಲ್ ನಡೆಯುತ್ತಿದೆ ಎಂದು ಅನ್ವಿಸಾ ತಿಳಿಸಿದೆ.
ಈ ವರೆಗೆ ಆಸ್ಟ್ರೆಜೆನಿಕಾ ಪ್ರಯೋಗದಲ್ಲಿ 1.7%ನಷ್ಟು ಪ್ರತಿಕೂಲ ಪರಿಣಾಮಗಳು ಹಾಗೂ ಸಾವುಗಳು ಘಟಿಸಿವೆ ಎಂದು ತಿಳಿದು ಬಂದಿದೆ.
ಲಸಿಕೆ ಪ್ರಯೋಗದ ಹಂತದಲ್ಲಿ‌ ಸಾವಿಗೀಡಾದ ವ್ಯಕ್ತಿಯ ಬಗ್ಗೆ ಇದುವರೆಗೂ‌ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಸಿಕೆಯ ಮೂರನೇಯ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ನೆರವು ನೀಡಿರುವ ಸಾವೋ‌ಪಾಲೋನ ಫೆಡರಲ್ ವಿಶ್ವವಿದ್ಯಾಯಾಲಯ ‘ಮೃತ ವ್ಯಕ್ತಿ‌ ಬ್ರೆಜಿಲ್‌ನವರೇ. ಆದರೆ ಆ ಸ್ವಯಂ ಸೇವಕ‌ ಯಾವ ಪ್ರದೇಶದವರೆಂದು ಹೇಳಲಾಗದು’ ಎಂದಿದ್ದಾರೆ.

Share This Article
Leave a comment