January 12, 2025

Newsnap Kannada

The World at your finger tips!

ksy

ಒಂದೆಡೆ ಕಂಡರು ಎಚ್‌ಡಿಕೆ, ಡಿಕೆಸಿ, ಸಿಪಿವೈ

Spread the love

ರಾಜಕೀಯದಲ್ಲಿ ಹಾವು-ಮುಂಗುಸಿಯಂತೆ ಬಡಿದಾಡುವ ಮೂವರು ರಾಜಕೀಯ ವಿರೋಧಿಗಳನ್ನು ಅಪರೂಪಕ್ಕೆ ಒಂದೆಡೆ ಸೇರುವಂತೆ ಮಾಡಿದ ಸಮಾರಂಭ ಚನ್ನಪಟ್ಟಣದಲ್ಲಿಂದು ನಡೆಯಿತು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಕವಿ ಸಿದ್ಧಲಿಂಗಯ್ಯನವರ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು. ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಮತ್ತು ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವೇದಿಕೆಯ ಮುಂಭಾಗದ ಒಂದೇ ಸಾಲಿನಲ್ಲಿ ಕುಳಿತಿದ್ದರು.


ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿರುವವರಿಗೆ ಇದೊಂದು ಅಪರೂಪದ ದೃಶ್ಯವಾಗಿತ್ತು. ಮೂರೂ ಪಕ್ಷದ ಕಾರ್ಯಕರ್ತರಿಗೂ ಈ ಸನ್ನಿವೇಶ ಪುಳಕವುಂಟುಮಾಡಿತ್ತು.


ಕುಮಾರಸ್ವಾಮಿ ಅವರ ಪಕ್ಕದಲ್ಲಿ ಡಿ.ಕೆ.ಸುರೇಶ್ ಆಸೀನರಾಗಿದ್ದರು.
ನಂತರ ಬಂದ ಯೋಗೇಶ್ವರ್ ಸುರೇಶ್ ಪಕ್ಕದ್ದಲ್ಲಿ ಕುಳಿತುಕೊಂಡು ಉಭಯಕುಶಲೋಪರಿ ನಡೆಸಿದರು. ಈ ಇಬ್ಬರು ಮುಖಂಡರು ಆಗಾಗ್ಗೆ ಮಾತನಾಡುತ್ತಿದ್ದರೂ ಎಚ್‌ಡಿಕೆ ಏನೂ ಮಾತನಾಡಲಿಲ್ಲ. ಕಾರ್ಯಕ್ರಮದ ಉದ್ಘಾಟನೆಯ ಸಮಯದಲ್ಲೂ ಎಚ್‌ಡಿಕೆ ಮತ್ತು ಯೋಗೇಶ್ವರ ಮಧ್ಯೆ ಡಿ.ಕೆ.ಸುರೇಶ್ ಇದ್ದದ್ದು ಗಮನಾರ್ಹ.

Copyright © All rights reserved Newsnap | Newsever by AF themes.
error: Content is protected !!