September 21, 2021

Newsnap Kannada

The World at your finger tips!

ಬೆಲೆ ಏರಿಕೆ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸುವೆ: ಬೊಮ್ಮಾಯಿ

Spread the love

ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರದಲ್ಲಿ ಒಂದೇ ಸಮನೆ ಬೆಲೆ ಏರಿಕೆಯಾಗುತ್ತಿರುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರೊಂದಿಗೆ ಸೆ. 5 ರಂದು ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ನಿನ್ನೆಯಿನ್ನೂ ಎಲ್‌ಪಿಜಿ ಸಿಲಿಂಡರ್ ಬೆಲೆ 25 ರೂ. ಹೆಚ್ಚಳವಾದ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸಚಿವರೊಂದಿಗಿನ ಮಾತುಕತೆಯ ನಂತರ ಪರಿಹಾರ ಕುರಿತು ಮಾತನಾಡಬಹುದು. ಅನಿಲ ಮತ್ತು ತೈಲ ಹೆಚ್ಚಳವು ಅಂತಾರಾಷ್ಟ್ರೀಯ ಮಾರಕಟ್ಟೆಯಲ್ಲಿ ನಿರ್ಧಾರವಾಗುತ್ತೆ. ಇದು ಕಾಂಗ್ರೆಸ್‌ನರಿಗೂ ತಿಳಿದಿದೆ ಎಂದು ಪ್ರತಿಕ್ರಿಯಿಸಿದರು.


ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಪ್ರಾಥಮಿಕ ಶಾಲೆ ಆರಂಭವಾಗಿರುವ ಕುರಿತು ಪರಿಶೀಲನೆ ಮಾಡಿಸಲಾಗುವುದು. ಕೇರಳ ಗಡಿಯಿಂದ ನಕಲಿ ವರದಿ ತೆಗೆದುಕೊಂಡು ರಾಜ್ಯಕ್ಕೆ ಬರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ ವಾಸ್ತವ್ಯಹೂಡಿದ್ದ ಮುಖ್ಯಮಂತ್ರಿಗಳು ದಾವಣಗೆರೆಗೆ ತೆರಳುವ ಮುನ್ನ ಸಾರ್ವಜನಿಕರಿಂದ ಅಹವಾಲು ಆಲಿಸಿದರು. ಹಾಗೆಯೇ ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ತೆರಳಿ ದೀಪಾರತಿ ಬೆಳಗಿ ಪೂಜೆ ಸಲ್ಲಿಸಿದರು. ಅಲ್ಲದೇ ಮೂರು ಸಾವಿರ ಮಠಕ್ಕೂ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದರು.

error: Content is protected !!