ಅಧಿವೇಶನದ ಮೊದಲ ದಿನ ಬಿಜೆಪಿ ನಾಯಕರ ಜತೆ ಡಿಕೆಶಿ ಗೆಳೆತನ

Team Newsnap
1 Min Read
On the first day of the session, DK was friendly with the BJP leaders ಅಧಿವೇಶನದ ಮೊದಲ ದಿನ ಬಿಜೆಪಿ ನಾಯಕರ ಜತೆ ಡಿಕೆಶಿ ಗೆಳೆತನ

ಬೆಂಗಳೂರು: ವಿಧಾನಸಭಾ ಅಧಿವೇಶನದ ಮೊದಲ ದಿನವೇ ಬಿಜೆಪಿ ನಾಯಕರ ಜತೆ ಡಿಕೆಶಿ ಫ್ರೆಂಡ್‌ಶಿಪ್‌ ಮಾಡಿದ್ದಾರೆ.

ಅಧಿವೇಶನ ನಡೆಯುವ ಮೊದಲು ವಿಪಕ್ಷದ ಮೊಗಸಾಲೆಗೆ ಬಂದ ಡಿಕೆಶಿ ಬಿಜೆಪಿ ಸದಸ್ಯರಿಗೆ ಶುಭ ಕೋರಿದ್ದಾರೆ.

ಈ ವೇಳೆ ಬೊಮ್ಮಾಯಿ, ಯತ್ನಾಳ್, ಮುನಿರತ್ನ, ಅಶೋಕ್, ರಮೇಶ್ ಜಾರಕಿಹೊಳಿ ಸೇರಿದಂತೆ ಇತರ ನಾಯಕರಿಗೆ ಡಿಕೆಶಿ ಹ್ಯಾಂಡ್‌ಶೇಕ್‌ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿಗೆ ಹೇಗಿದ್ದೀರಿ ಎಂದು ಕೇಳಿ ಕೈಕುಲುಕಿದ್ದಾರೆ. ವಿಪಕ್ಷ ಸದಸ್ಯರ ಜತೆ ಜತೆಗೆ ನಿಂತು ಫೋಟೋಗೆ ಡಿಕೆಶಿ ಪೋಸ್ ಕೊಟ್ಟಿದ್ದಾರೆ.

16ನೇ ವಿಧಾನಸಭೆ ರಚನೆ ಹಾಗೂ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರದ ಉದ್ದೇಶದಿಂದ ಇಂದಿನಿಂದ ಮೂರು ದಿನ ವಿಧಾನಸಭೆ ಅಧಿವೇಶನ ನಡೆಸಲಾಗುತ್ತಿದೆ.

ಹಂಗಾಮಿ ಸಭಾಧ್ಯಕ್ಷ ಆರ್‌ವಿ ದೇಶಪಾಂಡೆ ಚುನಾವಣೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ 224 ಮಂದಿ ಶಾಸಕರು ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದನ್ನು ಓದಿ – ಮತದಾರರಿಗೆ ಹಣ ಹಂಚದಿದ್ರೆ ನನಗೆ ವಾಪಸ್ ಕೊಡಿ: ನಾರಾಯಣಗೌಡ

15ನೇ ವಿಧಾನಸಭೆ ಅವಧಿ ಮೇ 23ಕ್ಕೆ ಅಂತ್ಯಗೊಳ್ಳಲ್ಲಿದ್ದು, ಅಷ್ಟರೊಳಗೆ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಪೂರ್ಣಗೊಳ್ಳಬೇಕಿದೆ.

Share This Article
Leave a comment